ಸಂವಿಧಾನ ಚೌಕಟ್ಟಲ್ಲೇ ಪ್ರತ್ಯೇಕ ಧ್ವಜ !

Kannada News

19-07-2017

ಬೆಂಗಳೂರು: ರಾಜ್ಯಕ್ಕೆ ಪ್ರತ್ಯೇಕ ಧ್ವಜ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನಲ್ಲಿ ಕಾನೂನು ಸಚಿವ ಟಿ.ಬಿ ಜಯಚಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಸಮಿತಿಯನ್ನ ಸರ್ಕಾರ ರಚನೆ ಮಾಡಿದೆ, ಪರ-ವಿರೋಧ ವಿಚಾರಗಳ ಚರ್ಚೆಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ವಿಚಾರವನ್ನು ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡುವುದಾಗಿ ತಿಳಿಸಿದರು. ಇನ್ನು ಈ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿವಿಧ ಸಂಘಟನೆಗಳ ಮನವಿ ಮೇರೆಗೆ ಸಮಿತಿ ಮಾಡಿದ್ದೇವೆ. ವರದಿ ಕೊಟ್ಟ ಮೇಲೆ, ಕಾನೂನು, ಸಂವಿಧಾನದ ಅಡಿಯಲ್ಲಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ಇನ್ನು ಬಿಎಸ್ ವೈ ಹಾಗೂ ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದೂ, ಬಿಜೆಪಿ ಹಾಗೂ ಜೆಡಿಎಸ್ ರಾಜಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ, ಬಿಜೆಪಿ ಅಧಿಕಾರದಲ್ಲಿದ್ದ 5 ವರ್ಷ ಏನು ಮಾಡಿಲ್ಲ. ಜನಗಳ ವಿರುದ್ಧ ಅವರು ಕೆಲಸ ಮಾಡಿದ್ದರು, ಅವರು ಮಾಡಿಲ್ಲ, ನಾವು ಮಾಡಿರೋದಕ್ಕೆ ಅವರು ಸಹಿಸಲು ಆಗುತ್ತಿಲ್ಲ ಎಂದರು. ಸಂವಿಧಾನದಲ್ಲಿ ಪ್ರತ್ಯೇಕ ಧ್ವಜ ಇರಬಾರದು,ಇರಬೇಕು ಅಂತ ಎಲ್ಲೂ ಹೇಳಿಲ್ಲ. ಬಿಜೆಪಿ, ಜೆಡಿಎಸ್ ರಾಜಕೀಯಕ್ಕಾಗಿ ವಿರೋಧ ಮಾಡುತ್ತಿದೆ. ರಾಷ್ಟ್ರ ಧ್ವಜಕ್ಕೆ ಧಕ್ಕೆ ಯಾಗುವಂತ ಕೆಲಸ ಮಾಡುವುದಿಲ್ಲ, ರಾಷ್ಟ್ರಧ್ವಜದ ಕೆಳಗೆ ನಮ್ಮ ಧ್ವಜ ಹಾರಿಸುವ ಕುರಿತು ಚಿಂತನೆ‌ ಇರೋದು, ರಾಷ್ಟ್ರದ ಐಕ್ಯತೆ ಸಾರ್ವಭೌಮತೆಗೆ ಧಕ್ಕೆ ತರೋದಿಲ್ಲ, ನಾಡಗೀತೆಯಿಂದ ರಾಷ್ಟ್ರಗೀತೆಗೆ ಧಕ್ಕೆ‌ ಆಗಿದೆಯಾ? ಹಾಗೆ ರಾಜ್ಯ ಧ್ವಜದಿಂದ ಧಕ್ಕೆ ಆಗುವುದಿಲ್ಲ, ಅಂತಿಮವಾಗಿ ಸಮಿತಿ ವರದಿ ಕೊಟ್ಟ ಮೇಲೆ ನಿರ್ಧಾರ ಮಾಡುವುದಾಗಿ ತಿಳಿಸಿದ್ದಾರೆ. ಚುನಾವಣೆಗಾಗಿ ನಾವು ಇದನ್ನು ಮಾಡಿಲ್ಲ, ಕಳೆದ ಜೂನ್ ನಲ್ಲಿ ಸಮಿತಿ ರಚಿಸಿದ್ದೇವೆ, ಚುನಾವಣೆ ಇನ್ನು 9 ತಿಂಗಳಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ