ಬೈಕ್-ಕಾರು ಕಳ್ಳರ ಬಂಧನ !

Kannada News

19-07-2017

ಮೈಸೂರು: ಬೈಕ್, ಕಾರು ಹಾಗೂ ಆಟೋಗಳನ್ನು ಕಳುವು ಮಾಡುತ್ತಿದ್ದ ಮೂವರು ಖದೀಮರನ್ನು, ಮೈಸೂರಿನ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಗೌತಮ್ (೧೯), ಕಿರಣ್ (೨೩) ಹಾಗೂ ಕಾರ್ತಿಕ್ (೧೯) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 3.70 ಲಕ್ಷ ರೂಪಾಯಿ ಮಾಲ್ಯದ ಕಳವು ಮಾಲುಗಳು ವಶಪಡಿಸಿಕೊಂಡಿದ್ದಾರೆ. 8 ಬೈಕ್, ಒಂದು ಕಾರು, ಆಟೋ ಹಾಗೂ 1 ಟಿವಿಎಸ್ ಮೊಪೆಡ್ ವಶಕ್ಕೆ ಪಡೆದಿದ್ದಾರೆ. ಕೊಲೆ ಪ್ರಕರಣ ಒಂದರಲ್ಲಿ ಆರೋಪಿಯಾಗಿರುವ ಗೌತಮ್ ಹಾಗೂ ಕೊಲೆ ಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಕಿರಣ್, ಇದೀಗ ಪೊಲೀಸರ ಬಂಧಿಯಾಗಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ತನಿಖೆ ಮುಂದುವರೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಮೈಸೂರು ಬೈಕ್-ಕಾರು ಕಳ್ಳರ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ