ನಕಲಿ ಕಂಪನಿ ಬಟ್ಟೆ: ವ್ಯಕ್ತಿ ಬಂಧನ

Kannada News

19-07-2017

ಬೆಂಗಳೂರು: ನಗರದ ಹೊಂಗಸಂದ್ರದ 5ನೇ ಕ್ರಾಸ್‍ ನ, ಗೋಡೌನ್ ಒಂದರಲ್ಲಿ ಅಲೆನ್ ಸೋಲಿ, ಲೂಯೀಸ್ ಫಿಲಿಪ್ ಸೇರಿದಂತೆ, ಪ್ರತಿಷ್ಠಿತ ಕಂಪನಿಗಳ ನಕಲಿ ಬಟ್ಟೆಗಳನ್ನು ಅಕ್ರಮ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ವಿವೇಕಾನಂದ ನಗರದ ಶಿವಕುಮಾರ್ (30) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಸುಮಾರು 15.80 ಲಕ್ಷ ಬೆಲೆ ಬಾಳುವ ನಕಲಿ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೊಮ್ಮನಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ಹೊಂಗಸಂದ್ರದ ಗೋಡೌನ್ ಒಂದರ ಮೇಲೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ, ಪ್ರತಿಷ್ಠಿತ ಕಂಪನಿಗಳ 15 ಲಕ್ಷ 88 ಸಾವಿರ ಮೌಲ್ಯದ, ಒಟ್ಟು 1,015 ನಕಲಿ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ