ಕುಖ್ಯಾತ ವಂಚಕನ ಸೆರೆ !

Kannada News

19-07-2017 324

ಬೆಂಗಳೂರು: ಸಂವೇದನಾ ಟ್ರಸ್ಟ್‍ ನ ದೇಣಿಗೆ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸಿ ಪರಾರಿಯಾಗಿದ್ದ, ಕುಖ್ಯಾತ ವಂಚಕನೊಬ್ಬನನ್ನು ಬಂಧಿಸಿರುವ ಸಿಟಿ ಮಾರ್ಕೇಟ್ ಪೊಲೀಸರು, ಆತನಿಂದ 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಯಲಹಂಕ ಡೌನ್ ಬಜಾರ್ ರಸ್ತೆಯ, ನಾಗೇಶ್ವರಿ ದೇವಸ್ಥಾನ ಬಳಿ ನಿವಾಸಿ ಜಗದೀಶ್ ಷಾ ಬಂಧಿತ ಆರೋಪಿಯಾಗಿದ್ದಾನೆ. ಸಂವೇದನಾ ಟ್ರಸ್ಟ್ ಹೆಸರಿನಲ್ಲಿ ಸಾರ್ವಜನಿಕರನ್ನು ನಂಬಿಸಿ ಹಣ, ಚಿನ್ನಾಭರಣ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಚಿಕ್ಕಪೇಟೆಯ ಪ್ರವೀಣ್ ಕುಮಾರ್ ಎಂಬವರು ಸಿಟಿ ಮಾರ್ಕೆಟ್ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿ ಜಗದೀಶ್ ಷಾ ಕಳೆದ ಜೂ.27ರಂದು ತಮ್ಮ ಕಚೇರಿಗೆ ಬಂದು 58 ಗ್ರಾಂ ತೂಕದ ಚಿನ್ನದ 6 ಸರ, ಮರುದಿನ 3 ಚಿನ್ನದ ಚೈನು ಸೇರಿ ಒಟ್ಟು 1,08,000 ರೂ. ಮೌಲ್ಯದ ಚಿನ್ನಾಭರಣ ಪಡೆದು ಚೆಕ್ ನೀಡಿ ಹೋಗಿದ್ದರು. ಆದರೆ ಚೆಕ್ ಬ್ಯಾಂಕಿಗೆ ಹಾಕಿದಾಗ ಅದರಲ್ಲಿ ಹಣ ಇಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದರು. ಷಾ ಅವರಿಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಪ್ರವೀಣ್ ಠಾಣೆಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಆರೋಪಿಯನ್ನು ಯಲಹಂಕದಲ್ಲಿ ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈತನಿಂದ ಒಟ್ಟು 9,48,000 ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಅವರ ಮಾರ್ಗದರ್ಶನದಲ್ಲಿ ಚಿಕ್ಕಪೇಟೆ ಉಪ ವಿಭಾಗದ ಸಹಾಯಕ ಆಯುಕ್ತ ಎನ್.ನಿರಂಜನ್ ರಾಜ್ ಅರಸ್ ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಕುಖ್ಯಾತ ವಂಚಕನ ಸೆರೆ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ