ಸ್ಥಳಾಂತರಗೊಂಡಿದ್ದ ಕೈದಿ ಸ್ಥಿತಿ ಗಂಭೀರ !

Kannada News

19-07-2017

ಬೆಂಗಳೂರು: ಜೈಲು ಅಕ್ರಮಗಳ ಬಗ್ಗೆ ರಾಜ್ಯ ಸರ್ಕಾರ, ನಿವೃತ್ತ ಐಎಎಸ್ ಅಧಿಕಾರಿ ವಿನಯ್‍ ಕುಮಾರ್ ನೇತೃತ್ವದಲ್ಲಿ  ತನಿಖೆಗೆ ಆದೇಶಿಸಿದ ನಂತರ, ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಿದ್ದ  ಮೂವರು ಕೈದಿಗಳಲ್ಲಿ ಓರ್ವ ತೀವ್ರ ಅಸ್ವಸ್ಥಗೊಂಡಿದ್ದಾನೆ. ಜೈಲಿನ ಚಿಕಿತ್ಸಾಲಯದಲ್ಲಿಯೇ ಅಸ್ವಸ್ಥಗೊಂಡಿರುವ ಕೈದಿ ಅನಂತಮೂರ್ತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಕಾರಾಗೃಹಗಳ ಹಿರಿಯ ಅಧಿಕಾರಿಗಳ ಪರ ವಿರೋಧವಾಗಿ ಜೈಲಿನಲ್ಲಿ ಉಂಟಾಗಿದ್ದ ಪ್ರತಿಭಟನೆ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಿಂದ ಹಿಂಡಲಗಾ ಜೈಲಿಗೆ ಅನಂತಮೂರ್ತಿ ಸೇರಿದಂತೆ ಮೂವರು ಕೈದಿಗಳನ್ನು ಸ್ಥಳಾಂತರಿಸಲಾಗಿತ್ತು.

ಹಿಂಡಲಗಾ ಜೈಲಿಗೆ ಸ್ಥಳಾಂತರಗೊಂಡಿರುವ ಕೈದಿ ಅನಂತಮೂರ್ತಿ ಅಸ್ವಸ್ಥನಾಗಿದ್ದಕ್ಕೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ರಾತ್ರೋರಾತ್ರಿ ಜೈಲು ಅಧಿಕಾರಿಗಳು ಬಿಡುಗಡೆ ಮಾಡಿಕೊಂಡು ಹೋಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿ ಅನಂತಮೂರ್ತಿ ಮೇಲೆ ಅಧಿಕಾರಿಗಳಿಂದ ಹಲ್ಲೆ ನಡೆದಿತ್ತು ಎಂಬ ಆರೋಪ ಕೇಳಿಬಂದಿತ್ತು. ಆದರೆ ಈ ವಿಚಾರವನ್ನು ಹಿಂಡಲಗಾ ಜೈಲು ಅಧಿಕಾರಿಗಳು ಅಲ್ಲಗಳೆದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ