ದೆಹಲಿ ತಲುಪಿದ ‘ಕಿಸಾನ್ ಯಾತ್ರಾ’

Kannada News

19-07-2017

ನವದೆಹಲಿ: ಕಳೆದ ಹದಿನೈದು ದಿನಗಳ ಹಿಂದೆ ರೈತರ ಸಮಸ್ಯೆಗಳ ಕುರಿತು ಪ್ರಾರಂಭಿಸಿದ್ದ, ಸ್ವರಾಜ್ ಅಭಿಯಾನ ನೇತೃತ್ವದಲ್ಲಿನ ಕಿಸಾನ್ ಯಾತ್ರಾ’ ಇಂದು ದೆಹಲಿ ತಲುಪಿದೆ. ದೆಹಲಿಯ ಜಂತರ್ ಮಂತರ್ ನಲ್ಲಿ ರೈತರು ಸಮಾವೇಶಗೊಂಡು ಭಾರೀ ಪ್ರತಿಭಟನೆ ನಡೆಸಲಿದ್ದಾರೆ. ಈ ಕಿಸಾನ್ ಯಾತ್ರೆಯು ಮಧ್ಯ ಪ್ರದೇಶದ ಮಂಡ್ಸೂರ್ ಪ್ರದೇಶದಿಂದ ಪ್ರಾರಂಭವಾಗಿದ್ದು, ಸುಮಾರು 6 ರಾಜ್ಯಗಳಲ್ಲಿ ಕಿಸಾನ್ ಯಾತ್ರೆ ನಡೆಸಿ, ಸಮಸ್ಯೆಗಳ ಕುರಿತು ಚರ್ಚೆ ನಡೆಸಿವೆ. ಇನ್ನು ದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ದೇಶದ ವಿವಿಧೆಡೆಗಳಿಂದ ರೈತರು ಆಗಮಿಸಲಿದ್ದೂ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಮಾವೇಶಗೊಳ್ಳುವ ನಿರೀಕ್ಷೆ ಇದೆ ಎಂದು ಸ್ಚರಾಜ್ ಅಭಿಯಾನದ ಮುಖಂಡರು ತಿಳಿಸಿದ್ದಾರೆ. ರೈತರನ್ನು ಸಾಲಮುಕ್ತಗೊಳಿಸುವಂತೆ ಇದೇ ವೇಳೆ ಆಗ್ರಹಿಸಿದ್ದಾರೆ. ಪ್ರಮುಖವಾಗಿ ಮಂಡ್ಸೂರ್ ನಲ್ಲಿ ರೈತರ ಮೇಲೆ ನಡೆದ ಶೂಟ್ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದೇಕೆ ? ಎಂದು ಪ್ರಶ್ನಿಸಿದ್ದಾರೆ. ರೈತರ ಸಾಲ ಮನ್ನಾ ವಿಚಾರವಾಗಿ ಪ್ರಧಾನಿ ಮೋದಿ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನೂ ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ.    ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ