ಅಕ್ರಮ ಮರಳು ಜಪ್ತಿ !

Kannada News

19-07-2017

ಬೆಳಗಾವಿ: ಬೆಳಗಾವಿಯ ರಾಮದುರ್ಗದಲ್ಲಿ ೫ಕೋಟಿ ಮೌಲ್ಯದ ಅಕ್ರಮ ಮರಳು ಜಪ್ತಿ ಮಾಡಲಾಗಿದೆ. ಪಟ್ಟಣದ ಮುಳ್ಳೂರು ಘಾಟ್ ಬಳಿ ಮರಳು ಸಂಗ್ರಹಿಸಿದ್ದೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ-ಕಂದಾಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ. ಮಲಪ್ರಭಾ ನದಿಯ ಹೂಳೆತ್ತುವ ನೆಪದಲ್ಲಿ‌ ಅಕ್ರಮ ಮರಳು ಸಂಗ್ರಹ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಕ್ರಮ ಮರಳು ಸಂಗ್ರಹದಲ್ಲಿ ಸ್ಥಳೀಯ ಶಾಸಕ, ಅಶೋಕ ಪಟ್ಟಣ ಕೈವಾಡ ಇರುವ ಆರೋಪ ಕೇಳಿಬಂದಿದೆ. ವಾರದ ಹಿಂದೆಯಷ್ಟೇ ಈ ಕುರಿತು, ಮಾಜಿ ಶಾಸಕ ಮಹದೇವಪ್ಪ ಯಾದವಾಡ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಮರಳು ಜಪ್ತಿ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಕೂಡ ಸಲ್ಲಿಸಿದ್ದರು. ನಿನ್ನೆಯಷ್ಟೇ ಅಕ್ರಮ ಮರಳು ತಡೆಯಲು ಹೋದ ರಾಮದುರ್ಗ ತಹಶೀಲ್ದಾರರ ಕಾರಿಗೆ ಮರಳು ತುಂಬಿದ್ದ ಟ್ಯಾಕ್ಟರ್ ಡಿಕ್ಕಿ ಹೊಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಆಗಾಧ ಪ್ರಮಾಣ ಮರಳು ಜಪ್ತಿ ಮಾಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

ಬೆಳಗಾವಿ ಅಕ್ರಮ ಮರಳು ಜಪ್ತಿ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ