ಶಾಸಕ ಚಲುವರಾಯಸ್ವಾಮಿಯನ್ನು ಹುಡುಕಿಕೊಡಿ..?

Kannada News

18-07-2017

ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲದ ಶಾಸಕ ಎನ್.ಚಲುವರಾಯಸ್ವಾಮಿ ನಾಪತ್ತೆಯಾಗಿದ್ದಾರೆ ಎಂದು, ಮಂಡ್ಯ ಜಿಲ್ಲಾ ಎಸ್.ಪಿ ಗೆ, ಜೆಡಿಯು ಜಿಲ್ಲಾಧ್ಯಕ್ಷ ಬಿ.ಎಸ್.ಗೌಡ ದೂರು ಸಲ್ಲಿಸಿದ್ದಾರೆ. ಜುಲೈ 17ರಂದು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡದ, ಶಾಸಕ ಎನ್.ಚಲುವರಾಯಸ್ವಾಮಿ ಇದುವರೆಗೂ ಪತ್ತೆಯಾಗಿಲ್ಲ, ಆದ್ದರಿಂದ ಚಲುವರಾಯಸ್ವಾಮಿ ಅವರನ್ನು ಹುಡುಕಿ ಕ್ಷೇತ್ರದ ಜನರ ಎದುರು ಹಾಜರುಪಡಿಸುವಂತೆ ಎಸ್.ಪಿ ಗೆ ಮನವಿ ಮಾಡಿದ್ದಾರೆ. ಅಲ್ಲದೇ ವಿಧಾನಸಭಾ ಸಭಾಧ್ಯಕ್ಷರಿಗೂ ದೂರು ನೀಡಲಿರುವ ಬಿ.ಎಸ್.ಗೌಡ, ಚಲುವರಾಯಸ್ವಾಮಿಗೆ ಚುನಾವಣೆಯ ಗಂಭೀರತೆ ಇಲ್ಲದಂತೆ ಕಾಣುತ್ತಿದೆ. ಈ ಕುರಿತು ಚಲುವರಾಯಸ್ವಾಮಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ