80 ಲಕ್ಷ ನಿಷೇಧಿತ ನೋಟುಗಳ ವಶ !

Kannada News

18-07-2017

ಬೆಂಗಳೂರು: ನಗರದ ಆರ್‍ಎಂಸಿ ಯಾರ್ಡ್‍ನ, ಎಪಿಎಂಸಿ ಮಾರುಕಟ್ಟೆಯಲ್ಲಿ ನಿಷೇಧಗೊಂಡಿರುವ ಹಳೆ ನೋಟು ಬದಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಬಡ್ಡಿ ವ್ಯಾಪಾರಿಗಳನ್ನು, ಉತ್ತರ ವಿಭಾಗದ ಪೊಲೀಸರು ಬಂಧಿಸಿ, 80 ಲಕ್ಷ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಂಪಯ್ಯ ಲೇಔಟ್ ನ, ಗೌಡನ ಪಾಳ್ಯದ ನಂಜುಂಡ (47), ಮೈಸೂರಿನ ರಾಜೇಂದ್ರ ನಗರದ ಶಮೀಲ್ ಅಹ್ಮದ್ (39) ಬಂಧಿತ ಆರೋಪಿಗಳಾಗಿದ್ದು, ಇವರೊಂದಿಗೆ ಹಳೆಯ ನೋಟು ಬದಲಾವಣೆಯ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ. ಬಂಧಿತ ಆರೋಪಿಗಳಿಂದ ನಿಷೇಧಗೊಂಡಿರುವ 500, 1000 ಮುಖಬೆಲೆಯ 80 ಲಕ್ಷ ನೋಟುಗಳು, 2 ಮೊಬೈಲ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದರು. ಆರೋಪಿಗಳು ಹಳೆಯ ನೋಟುಗಳನ್ನು ಶೇ. 16 ರಿಂದ 18ರ ಕಮಿಷನ್ ಆಧಾರದ ಮೇಲೆ ಬದಲಾಯಿಸುವುದಾಗಿ ಮೈಸೂರಿನಿಂದ ತಂದು ಎಪಿಎಂಸಿ ಯಾರ್ಡ್ ನ, ಸಾಥ್ವಿಕ್ ಫುಡ್ಸ್ ಬಳಿ ಬದಲಾವಣೆಗೆ ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ, ಆರ್‍ಎಂಸಿ ಯಾರ್ಡ್ ಪೊಲೀಸ್ ಇನ್ಸ್ ಪೆಕ್ಟರ್ ಮೊಹಮ್ಮದ್ ಮುಕರಮ್ ಮತ್ತವರ ತಂಡ ಬಂಧಿಸಿದೆ. ಕೃತ್ಯದಲ್ಲಿ ಮೈಸೂರಿನ ಆರೋಪಿಯೊಬ್ಬ ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ