ಪಾಲಿಕೆ ಸದಸ್ಯನ ಆಸ್ತಿ ಮುಟ್ಟುಗೋಲು !

Kannada News

18-07-2017

ಮೈಸೂರು: ಹುಣಸೂರು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸುತ್ತಿರುವ, ಮೈಸೂರು ನಗರ ಪಾಲಿಕೆ, ಮಾಜಿ ಸದಸ್ಯ ಸಿ. ಮದೇಶ್ ಅಲಿಯಾಸ್ ಅವ್ವ ಮಾದೇಶ್ ಗೆ ಸೇರಿದ 5.35 ಕೋಟಿ ಮೌಲ್ಯದ ಸ್ವತ್ತುಗಳು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕೊಲೆ, ಒಳಸಂಚು, ಬೆದರಿಕೆ ಮೊದಲಾದ ಕೃತ್ಯಗಳಿಂದ ತನ್ನ ಹಾಗೂ ಕುಟುಂಬವರ ಹೆಸರಿನಲ್ಲಿ ಮಾದೇಶ್ ಮಾಡಿದ್ದ ಸ್ಥಿರಾಸ್ತಿಗಳ ಮುಟ್ಟುಗೋಲು ಹಾಕಿಕೊಳ್ಳುವಂತೆ, ಮೈಸೂರು ನಗರ ಪೊಲೀಸ್ ವತಿಯಿಂದ ಎನ್ ಫೋರ್ಸ್ ಮೆಂಟ್ ಡೈರಕ್ಟರೇಟ್ (ED) ರವರಿಗೆ ಕೋರಿಕೆ ಪತ್ರ ಸಲ್ಲಿಸಲಾಗಿತ್ತು. ಈ ಕೋರಿಕೆಯನ್ನು ಪರಿಗಣಿಸಿದ ಅಧಿಕಾರಿಗಳು, ಅವ್ವ ಮಾದೇಶ್ ಗೆ ಸೇರಿದ ಒಟ್ಟು 5.35 ಕೋಟಿ ಮೌಲ್ಯದ ಜಮೀನು ಮತ್ತು ಕಟ್ಟಡಗಳ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಸಂಬಂಧ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದೂ, ಮಾದೇಶ್ ಗೆ ಸೇರಿದ ಮತ್ತಷ್ಟು ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ