ವರ್ಗಾವಣೆ ಮಾಡಿರುವುದು ಶಿಕ್ಷೆ ಅಲ್ಲ !

Kannada News

18-07-2017

ಬೆಂಗಳೂರು: ಕಾರಗೃಹಗಳ ಉಪ ಪೊಲೀಸ್ ಮಹಾ ನಿರೀಕ್ಷಕಿ(ಡಿಐಜಿ)ಹುದ್ದೆಯಿಂದ ವರ್ಗಾವಣೆಗೊಂಡಿರುವ ರೂಪಾ ಅವರು ವರ್ಗಾವಣೆಗೊಳಿಸಿರುವ  ಸರ್ಕಾರದ ಆದೇಶವನ್ನು ಪಾಲಿಸುತ್ತೇನೆ ಎಂದು ಹೇಳಿದ್ದಾರೆ. ಸಂಚಾರ ಹಾಗೂ ರಸ್ತೆ ಸುರಕ್ಷತಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲು ಪೊಲೀಸ್ ಪ್ರಧಾನ ಕಚೇರಿಗೆ ಆಗಮಿಸಿದ ಡಿಐಜಿ ರೂಪಾ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರದ ವರ್ಗಾವಣೆ ಆದೇಶವನ್ನು ಪಾಲಿಸುವುದು ನನ್ನ ಕರ್ತವ್ಯ ಎಂದು  ಹೇಳಿದರು. ಜೈಲಿನ ಭ್ರಷ್ಟಾಚಾರ ಪ್ರಕರಣವನ್ನು ಬಯಲಿಗೆಳೆದ ವರದಿಗೆ ಸಂಬಂಧಿಸಿದಂತೆ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿಯವರು ಬೆಂಬಲ ವ್ಯಕ್ತಪಡಿಸಿರುವುದಕ್ಕೆ ರೂಪಾ ಧನ್ಯವಾದ ಸಲ್ಲಿಸಿದರು. ವರ್ಗಾವಣೆ ಕುರಿತು ಪ್ರತಿಕ್ರಿಯೆ ನೀಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಆರ್.ಕೆ.ದತ್ತಾ ಅವರು ರೂಪಾ ಅವರ ವರ್ಗಾವಣೆ ಮಾಡಿರುವುದು ಶಿಕ್ಷೆ ಅಲ್ಲ. ಸಂಚಾರ ಹಾಗೂ ರಸ್ತೆ ಸುರಕ್ಷತಾ ಇಲಾಖೆ ಕೂಡ ಮುಖ್ಯವಾದುದು. ಪ್ರತಿಯೊಂದು ಹುದ್ದೆಯೂ ಪ್ರಮುಖವಾಗಿದೆ ಎಂದರು. ಒತ್ತಾಯ ಪೂರ್ವಕವಾಗಿ ಕಾರಾಗೃಹ ಇಲಾಖೆಯಿಂದ ರಿಲೀವ್ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಆ ಸಂಬಂಧ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಾರಾಗೃಹ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದ್ದೀರಿ ಎಂಬ ಪ್ರಶ್ನೆಗೆ, ಕಾರಾಗೃಹ ಇಲಾಖೆ ನನಗೆ ಬರುವುದಿಲ್ಲ. ಅದು ಗೃಹ ಇಲಾಖೆಗೆ ಸೇರುತ್ತದೆ ಎಂದು ಪ್ರತಿಕ್ರಿಯಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ