ಬೈಕ್ ಗೆ ಲಾರಿ ಡಿಕ್ಕಿ ಯುವಕ ಬಲಿ !

Kannada News

18-07-2017

ಬೆಂಗಳೂರು: ನಂದಿನಿ ಲೇಔಟ್ ಬಸ್ ನಿಲ್ದಾಣದ ಡಾ.ರಾಜ್‍ಕುಮಾರ್ ಸಮಾಧಿ ಮುಂಭಾಗ ಸೋಮವಾರ ರಾತ್ರಿ ಹಿಂದಿನಿಂದ ವೇಗವಾಗಿ ಬಂದ ಲಾರಿ ಬೈಕ್‍ಗೆ ಡಿಕ್ಕಿ ಹೊಡೆದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಯಶವಂತಪುರದ ಸಚಿನ್(23)ಎಂದು ಮೃತಪಟ್ಟ ಕಾರ್ಯಕರ್ತನನ್ನು ಗುರುತಿಸಲಾಗಿದೆ. ಇತ್ತೀಚಿಗಷ್ಟೇ ಬಿಸಿಎ ಪದವಿ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದ ಸಚಿನ್‍ನನ್ನು ಸ್ನೇಹಿತರು ಲಗ್ಗರೆಯಲ್ಲಿ ಸಂಜೆ ನಡೆದ ಕಾರ್ಯಕರ್ತರ ಸಭೆಗೆ ಕರೆದಿದ್ದರು. ಸಭೆ ಮುಗಿಸಿಕೊಂಡು ರಾತ್ರಿ 8.15ರ ವೇಳೆ ಮನೆಗೆ ಸುಜುಕಿ ಬೈಕ್‍ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ನಂದಿನಿ ಲೇಔಟ್ ಬಸ್‍ ನಿಲ್ದಾಣದ ಬಳಿ ಡಾ.ರಾಜ್‍ಕುಮಾರ್ ಸಮಾಧಿ ಮುಂಭಾಗ ಬರುತ್ತಿದ್ದಂತೆ ಲಾರಿಯೊಂದು ಹಿಂಬದಿಯಿಂದ ಬೈಕ್‍ಗೆ ಡಿಕ್ಕಿ ಹೊಡೆದಿದೆ.  ಅಪಘಾತದ ತೀವ್ರತೆಗೆ ಸಚಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸಚಿನ್ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಾಜಾಜಿನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ