ಠಾಣೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ !

Kannada News

18-07-2017

ಬೆಂಗಳೂರು: ದಪ್ಪಗಿದ್ದೀಯಾ ಎಂದು ಹಂಗಿಸುತ್ತಾ ಕಿರುಕುಳ ನೀಡುತ್ತಿದ್ದ ಗಂಡನ ವರ್ತನೆಗೆ ಬೇಸತ್ತ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣೆಯ ಆವರಣದಲ್ಲಿ ಸೋಮವಾರ ರಾತ್ರಿ ನಡೆದಿದೆ. ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ವೈಯಾಲಿಕಾವಲ್ ಟೆಂಪಲ್ ಸ್ಟ್ರೀಟ್‍ನ ವಿನುತಾ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನರೇಂದ್ರ ಬಾಬುನನ್ನು 2007 ರಲ್ಲಿ ವಿನುತಾ ವಿವಾಹವಾಗಿದ್ದು, ಇಬ್ಬರ ನಡುವೆ ಕೌಟುಂಬಿಕ ಕಲಹವಿತ್ತು. ವಿನುತಾ ದಪ್ಪಗಿದ್ದರಿಂದ ಅವರನ್ನು ಯಾವಾಗಲೂ ದಢೂತಿ ಎಂದು ಹಂಗಿಸುತ್ತಾ ನರೇಂದ್ರಬಾಬು ಕಿರುಕುಳ ನೀಡುತ್ತಿದ್ದ.

ನರೇಂದ್ರ ಬಾಬು ಮನೆಯವರೂ ಕೂಡ ವಿನುತಾಗೆ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತ ಆಕೆ ವೈಯಾಲಿಕಾವಲ್ ಪೊಲೀಸರಿಗೆ ದೂರು ನೀಡಿದ್ದರು. ಪತಿ ಕೂಡ  ಈ ಕುರಿತು ಪ್ರತಿದೂರು ನೀಡಿದ್ದು, ಇಬ್ಬರ ಜಗಳ ಠಾಣೆ ಮೆಟ್ಟಿಲು ಹತ್ತಿತ್ತು. ನಿನ್ನೆ ಮಧ್ಯಾಹ್ನ ಕೂಡ ಪತಿಯ ವಿರುದ್ಧ ವಿನುತಾ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಅಷ್ಟರಲ್ಲಿ ರಾತ್ರಿ 10ರ ವೇಳೆ ಠಾಣೆಯ ಬಳಿ ಬಂದ ವಿನುತಾ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸರು ಅವರ ಕೈಯಲ್ಲಿದ್ದ ವಿಷದ ಬಾಟಲಿ ಕಿತ್ತೆಸೆದಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ನರೇಂದ್ರಬಾಬು ಮನೆಯವರು ಕೂಡ ವಿನುತಾಗೆ ಕಿರುಕುಳ ನೀಡುತ್ತಿದ್ದರು, ಇದಲ್ಲದೇ ಪತಿ ನರೇಂದ್ರಬಾಬು ಪಕ್ಕದ ಮನೆಯವರಿಂದ ವಿನುತಾಮೇಲೆ ಹಲ್ಲೆ ಮಾಡಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ವೈಯಾಲಿ ಕಾವಲ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ