ಜೈಲಿನಲ್ಲಿ ಕೈದಿಗಳ ಗಲಾಟೆ !

Kannada News

18-07-2017

ಬೆಂಗಳೂರು: ಡಿಜಿಪಿ ಸತ್ಯನಾರಾಯಣರಾವ್ ಡಿಐಜಿ ರೂಪಾ ಹಾಗೂ ಜೈಲು ಅಧೀಕ್ಷಕ ಕೃಷ್ಣಕುಮಾರ್ ಅವರನ್ನು ವರ್ಗಾವಣೆ ಮಾಡಿದರೂ ಜೈಲಿನಲ್ಲಿ ಕೈದಿಗಳ ಪರವಿರೋಧಿ ಗಲಾಟೆ ಕಡಿಮೆಯಾಗಿಲ್ಲ. ಅಧಿಕಾರಿಗಳ ವರ್ಗಾವಣೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಕೈದಿಗಳು ಪರ ವಿರೋಧ ಪ್ರತಿಭಟನೆಗೆ ಇಳಿದಿದ್ದು ಅವರನ್ನು ನಿಯಂತ್ರಿಸಲು ಜೈಲಿನ ಅಧಿಕಾರಿಗಳಿಗೆ ಸಾಕುಸಾಕಾಗಿ ಹೋಗಿದೆ. ಜೈಲಿನಲ್ಲಿನ 200ಕ್ಕೂ ಹೆಚ್ಚು ಮಂದಿ ಕೈದಿಗಳು ರೂಪಾ ಅವರ ವರ್ಗಾವಣೆ ಖಂಡಿಸಿ ಬೆಳಗಿನ ಉಪಹಾರ ತ್ಯಜಿಸಿ ಪ್ರತಿಭಟನೆ ನಡೆಸಿದರೆ, ಜೈಲು ಅಧೀಕ್ಷಕ ಕೃಷ್ಣಕುಮಾರ್ ಅವರ ವರ್ಗಾವಣೆ ಖಂಡಿಸಿ ಕೆಲವು ಕೈದಿಗಳು ಪ್ರತಿಭಟನೆಗಿಳಿದಿದ್ದಾರೆ.

ಇಬ್ಬರು ಅಧಿಕಾರಿಗಳ ಬೆಂಬಲಿಗ ಕೈದಿಗಳು ಪರ ವಿರೋಧ ಪ್ರತಿಭಟನೆಯಲ್ಲಿ ತೊಡಗಿರುವುದರಿಂದ ಕೈದಿಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಿದೆ. ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿಯ ಮೇಲೆ ಹಿರಿಯ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಅಧೀಕ್ಷಕಿ ಅನಿತಾ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಕೈದಿಗಳು ಜೈಲು ಅವ್ಯವಹಾರದಲ್ಲೂ ಅನಿತಾ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಹೀಗಾಗಿ ಅನಿತಾ ಅವರನ್ನೂ ಈ ಹುದ್ದೆಯಲ್ಲಿ ಮುಂದುವರಿಸಬಾರದು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ನೂತನ ಮುಖ್ಯ ಅಧೀಕ್ಷಕರನ್ನು ನೇಮಿಸಬೇಕೆಂದು ಕೈದಿಗಳು ಒತ್ತಾಯಿಸುತ್ತಿದ್ದಾರೆ. ಇದಲ್ಲದೆ ಕೃಷ್ಣಕುಮಾರ್ ಬೆಂಬಲಿಗರಿಂದಲೂ ಜೈಲಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕೃಷ್ಣಕುಮಾರ್ ವರ್ಗಾವಣೆ ರದ್ದು ಪಡಿಸಬೇಕೆಂದು ಆಗ್ರಹ ಕೇಳಿಬಂದಿದೆ ಎನ್ನಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ