ಶಿವಸೇನೆಗೆ ಕಾಂಗ್ರೆಸ್ ತಿರುಗೇಟು !

Kannada News

18-07-2017

ನವದೆಹಲಿ: ವಿರೋಧ ಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯ ಕುರಿತಾಗಿ ಶಿವಸೇನೆ ನೀಡಿದ್ದ ಹೇಳಿಕೆ ಕಾಂಗ್ರೆಸ್ ತಿರುಗೇಟು ನೀಡಿದೆ.  1993 ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ನನ್ನು ರಕ್ಷಿಸುವ ಸಲುವಾಗಿ ಗೋಪಾಲ್ ಕೃಷ್ಣ ಗಾಂಧಿ ತಮ್ಮ ಎಲ್ಲ ಅಧಿಕಾರವನ್ನೂ ಪ್ರಯೋಗಿಸಿದ್ದರು. ಈ ಬಗ್ಗೆ ರಾಷ್ಟ್ರಪತಿ ಅವರಿಗೂ ಪತ್ರ ಬರೆದಿದ್ದರು, ಇಂತಹ ಮನಸ್ಸಿನ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ಅದು ಹೇಗೆ ಪ್ರಮುಖ ಹುದ್ದೆಗೆ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ ಎಂದು ಶೀವಸೇನೆಯ ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದರು.

ಇನ್ನು ಶಿವಸೇನೆ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ತಮ್ಮ ಆಯ್ಕೆ ಉತ್ತಮವಾಗಿದ್ದು, ಅಹಿಂಸೆಯನ್ನು ಪ್ರತಿಪಾದಿಸುವ ಗಾಂಧಿವಾದಿಯನ್ನು ತಮ್ಮ ಅಭ್ಯರ್ಥಿಯನ್ನಾಗಿಸಿದ್ದೇವೆ. ಶಿವಸೇನೆ ಅದ್ಯಾವ ಮಾನದಂಡದ ಮೇಲೆ ಗೋಪಾಲಕೃಷ್ಣ ಗಾಂಧಿ ಅವರನ್ನು ವಿರೋಧಿಸುತ್ತಿದೆಯೋ ತಿಳಿಯುತ್ತಿಲ್ಲ. ಗೋಪಾಲ್ ಕೃಷ್ಣ ಗಾಂಧಿ ಅವರು ಗಾಂಧಿ ಸಂತತಿಯವರು, ಪ್ರಮುಖವಾಗಿ ಮಹಾತ್ಮಾ ಗಾಂಧಿ ಅವರ ಅಹಿಂಸಾ ತತ್ವವನ್ನೇ ಅಳವಡಿಸಿಕೊಂಡು ಬಂದವರು. ಇದೇ ಕಾರಣಕ್ಕೆ ಗಲ್ಲು ಶಿಕ್ಷೆ ಅವರು ವಿರೋಧಿಸಿದ್ದರು. ಮೊದಲು ನೀವು ನೋಡುತ್ತಿರುವ ದೃಷ್ಣಿಕೋನವನ್ನು ಬದಲಾಯಿಸಿ ಎಂದು ಆನಂದ್ ಶರ್ಮಾ ತಿರುಗೇಟು ನೀಡಿದ್ದಾರೆಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Muchas gracias. ?Como puedo iniciar sesion?
  • tubvmwbvin
  • zvutikftcb