ಪ್ರಧಾನಿ ವಿರುದ್ಧ ಮಮತಾ ಗರಂ !

Kannada News

18-07-2017

ನವದೆಹಲಿ: ಗೋರಕ್ಷಣೆ ಹೆಸರಿನಲ್ಲಿ ನಿರ್ಭೀತಿಯಿಂದ ವರ್ತಿಸಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಗೋರಕ್ಷಕರಿಗೆ ಅಧಿಕಾರ ನೀಡಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಪುರಾಣದ ಕಥೆಯಲ್ಲಿನ ಹನುಮಂತ ತನ್ನ ಬಾಲಕ್ಕೆ ಹಚ್ಚಿದ ಬೆಂಕಿಯಲ್ಲಿ ಇಡೀ ಲಂಕೆಯನ್ನು ಸುಟ್ಟು ಬೂದಿ ಮಾಡಿದಂತೆ, ಗೋರಕ್ಷಣೆ ಹೆಸರಲ್ಲಿ ಬಾಲಕ್ಕೆ ಬೆಂಕಿ ಹಚ್ಚಿಕೊಂಡಿರುವ ಕೋತಿಗಳನ್ನು ಸ್ವತಃ ಪ್ರಧಾನಿಯವರೇ ಬಿಡುಗಡೆ ಮಾಡಿದ್ದಾರೆ, ಕೇಂದ್ರ ಹಚ್ಚಿರುವ ಈ ಬೆಂಕಿಯನ್ನು ರಾಜ್ಯಗಳು ಆರಿಸಬೇಕೇ ಎಂದು ಅವರು ಪ್ರಶ್ನಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯಿಂದ ಪಶ್ಚಿಮ ಬಂಗಾಳ ನೋವನ್ನನುಭವಿಸುತ್ತಿದೆ. ಚೀನಾ, ಭೂತಾನ್, ನೇಪಾಳ ಮತ್ತು ಬಾಂಗ್ಲಾ ದೇಶದೊಡನೆ ಕೇಂದ್ರ ಸಂಬಂಧ ಹಾಳುಮಾಡಿಕೊಳ್ಳುತ್ತಿರುವುದರಿಂದ ಎಂರಡು ರಾಷ್ಟ್ರಗಳ ನಡುವಿನ ತಿಕ್ಕಾಟದಲ್ಲಿ ನಾವು ತೊಂದರೆಯಲ್ಲಿ ಸಿಲುಕಿದ್ದೇವೆ ಎಂದು ಆರೋಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ