ಪಾಕ್ ವರದಿ ತಳ್ಳಿಹಾಕಿದ ಭಾರತ !

Kannada News

18-07-2017

ನವದೆಹಲಿ: ಡೋಕ್ಲಾಮ್ ವಿವಾದ ಸಂಬಂಧ ಭಾರತದ ಮೇಲೆ ಚೀನಾ ರಾಕೆಟ್ ದಾಳಿ ನಡೆಸಿದ್ದು, ದಾಳಿಯಲ್ಲಿ 150 ಭಾರತೀಯ ಯೋಧರು ಸಾವನ್ನಪ್ಪಿದ್ದಾರೆಂಬ ಪಾಕಿಸ್ತಾನ ವರದಿಗಳನ್ನು ಭಾರತ ತಳ್ಳಿಹಾಕಿದೆ. ಡೋಕ್ಲಾಮ್ ವಿವಾದ ಸಂಬಂಧ ಪಾಕಿಸ್ತಾನ ಮಾಧ್ಯಮಗಳು ಮಾಡಿರುವ ವರದಿಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ಅವರು, ಇಂತಹ ವರದಿಗಳು ಆಧಾರ ರಹಿತವಾದದ್ದು. ದ್ವೇಷಪೂರಿತ ಹಾಗೂ ಹಾನಿಕಾರಕ ವರದಿಗಳಾಗಿವೆ. ಅರಿವಿಲ್ಲದವರಷ್ಟೇ ಇಂತಹ ವರದಿಗಳನ್ನು ಮಾಡಿರುವ ಮಾಧ್ಯಮವನ್ನು ಜವಾಬ್ದಾರಿಯುತ ಮಾಧ್ಯಮವೆಂದು ಪರಿಗಣಿಸುತ್ತಾರೆಂದು ಹೇಳಿದ್ದಾರೆ.

ಸಿಕ್ಕಿಂ ಗಡಿ ವಿವಾದ ಸಂಬಂಧ ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಬಿಕ್ಕಟ್ಟು ಕುರಿತಂತೆ ನಿನ್ನೆಯಷ್ಟೇ ವರದಿ ಮಾಡಿದ್ದ ಪಾಕಿಸ್ತಾನ ಮೂಲದ ಚಾನೆಲ್ ವೊಂದು, ಡೋಕ್ಲಾಮ್ ಗಡಿ ವಿವಾದ ಸಂಬಂಧ ಗಡಿಯಲ್ಲಿ ಚೀನಾ ಭಾರತದ ಮೇಲೆ ರಾಕೆಟ್ ದಾಳಿ ನಡೆಸಿದ್ದು, ದಾಳಿಯಲ್ಲಿ 150 ಭಾರತೀಯ ಯೋಧರು ಸಾವನ್ನಪ್ಪಿದ್ದಾರೆಂದು ವರದಿಗಳನ್ನು ಮಾಡಿತ್ತು. ರಾಕೆಟ್ ದಾಳಿಗೆ ಹಲಾರು ಭಾರತೀಯ ಯೋಧರು ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡಿತ್ತು. ಅಲ್ಲದೆ, 2 ನಿಮಿಷಗಳ ವಿಡಿಯೋ ತುಣುಕನ್ನು ಪಾಕಿಸ್ತಾನ ಮಾಧ್ಯಮಗಳು ತೋರಿಸಿವೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ