ಸಿಂಧ್ ಪ್ರತ್ಯೇಕತೆಗೆ ತೀವ್ರ ಹೋರಾಟ !

Kannada News

18-07-2017

ನವದೆಹಲಿ: ಪಾಕಿಸ್ತಾನ ದ ಸಿಂದ್ ಪ್ರಾಂತ್ಯದಲ್ಲಿ ಪ್ರತ್ಯೇಕ ಸಿಂಧ್ ದೇಶದ ಪರ ಹೋರಾಟಗಳು ಹೆಚ್ಚುತ್ತಿವೆ. ಪಾಕ್ ವಿರೋಧಿ ಭಾವನೆಗಳು ಸಿಂಧ್ ಪ್ರಾಂತ್ಯದಲ್ಲಿ ಮುಂದುವರೆದಿದ್ದು, ಸ್ವಾತಂತ್ರ್ಯ ಸಿಂಧ್ ಗಾಗಿ ಬೃಹತ್ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು. ಸಿಂದ್ ನ ಹೈದರಾಬಾದ್ ನಲ್ಲಿ ಜೆಎಸ್ಎಂಎಂ ನ ನೂರಾರು ಕಾರ್ಯಕರ್ತರು ಈ ಪ್ರತಿಬಟನೆಯಲ್ಲಿ ಪಾಲ್ಗೊಂಡಿದ್ದರು. ಪಾಕ್ ನಲ್ಲಿನ ನಿಷೇಧಿತ ಸಂಘಟನೆಯಾದ ಜೆಯಾಹ್ ಸಿಂಧ್ ಮುಟ್ಟಾಹಿದ ಮಹಜ್ ಕಾರ್ಯಕರ್ತರು ಪ್ರತ್ಯೇಕ ಸಿಂಧ್ ಜೊತೆಗೆ ಸಿಂಧ್ ಪರ ಹೋರಾಟಗಾರರನ್ನ ಅಪಹರಿಸಿರುವುದನ್ನ ಮತ್ತು ಐಎಸ್ಐ ಪ್ರೇರಿತ ಪಾಕ್ ಸೇನೆಯ ದುಷ್ಟ ವರ್ತನೆಯನ್ನ ಖಂಡಿಸಿ ಪ್ರತಿಭಟನೆಯನ್ನ ಕೈಗೊಳ್ಳಲಾಗಿತ್ತು.  ಹೈದರಾಬಾದ್ ನ ಸಿಂಧ್ ವಿಶ್ವವಿದ್ಯಾಲಯದಿಂದ ಬೃಹತ್ ರ್ಯಾಲಿಯನ್ನು ಹೋರಾಟಗಾರರು ಹಮ್ಮಿಕೊಂಡಿದ್ದರು.

ಜಮ್ಮು- ಕಾಶ್ಮೀರದಲ್ಲಿ ಭಾರತ ವಿರೋಧಿ ಘೋಷಣೆ ಮೊಳಗಿದರೆ ಆನಂದಪಡುವ ಪಾಕಿಸ್ತಾನ, ತನ್ನ ನಿಯಂತ್ರಣದಲ್ಲಿರುವ ಸಿಂಧ್ ರಾಜ್ಯದಲ್ಲೇ ಭರ್ಜರಿ ಅವಮಾನಕ್ಕೆ ತುತ್ತಾಗಿದೆ. ಜನರು ಪಾಕಿಸ್ತಾನ ವಿರೋಧಿ ಘೋಷಣೆ ಕೂಗುತ್ತಾ, ಭದ್ರತಾ ಪಡೆಗಳ ವಿರುದ್ಧ ಬೀದಿಗಿಳಿದು ಹೋರಾಡುತ್ತಿರುವುದರಿಂದ ಪಾಕ್‌ ಕಂಗಾಲಾಗುವಂತಾಗಿದೆ. ಇನ್ನು, ಗಿಲ್ಗಿಟ್‌- ಬಾಲ್ಟಿಸ್ತಾನದಲ್ಲಿ ಭದ್ರತಾ ಪಡೆಗಳು ದೌರ್ಜನ್ಯ, ಮಾನವ ಹಕ್ಕುಗಳನ್ನು ಉಲ್ಲಂಘಸುತ್ತಿವುದನ್ನ ಖಂಡಿಸಿ ಈ ಪ್ರದೇಶದಲ್ಲೂ ಜನರು ಹೋರಾಟಕ್ಕೆ ಸಜ್ಜಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ