ಸಂಸತ್ ಎದುರು ಬಿಜೆಪಿ ಪ್ರತಿಭಟನೆ !

Kannada News

18-07-2017

ನವದೆಹಲಿ: ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಅಹಿತಕರ ಘಟನೆಗಳು, ಮತ್ತು ಅಲ್ಲಿನ ಕೊಲೆ ಪ್ರಕರಣ, ಕೋಮು ಗಲಭೆ, ಇನ್ನು ಇತ್ತೀಚೆಗೆ ತೀವ್ರ ವಿವಾದ ಸೃಷ್ಟಿಸಿರುವ ಪರಪ್ಪನ ಅಗ್ರಹಾರದ ಭ್ರಷ್ಚಾಚಾರ ಪ್ರಕರಣ, ಇವೆಲ್ಲವನ್ನೂ ವಿರೋಧಿಸಿ ಸಂಸತ್ ಭವನದ ಮುಂದೆ, ಕರ್ನಾಟಕದ  ಬಿಜೆಪಿ ಸಂಸತ್ ಸದಸ್ಯರು ಹಾಗು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಅವರು ಧರಣಿ ನಡೆಸಿದ್ದಾರೆ. ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕು ಹಾಗೂ ರಾಜಕೀಯ ಹತ್ಯೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸಂಸತ್ ಭವನದ ಮುಂದೆ ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ, ನಳೀನ್ ಕುಮಾರ್ ಕಟೀಲ್, ಸಂಸದೆ ಶೋಭಾ ಕರಂದ್ಲಾಜೆ, ಪ್ರಹಲ್ಲಾದ್ ಜೋಶಿ, ಸಂಸದ ಬಿ. ಶ್ರೀರಾಮುಲು ಮತ್ತಿತರ ಬಿಜೆಪಿ ಸಂಸದರು ಪ್ರತಿಭಟಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ