ಅಧಿಕಾರಿಯ ಶೂ ಕೈಯಲ್ಲಿ ಹಿಡಿದ ಚಾಲಕ !

Kannada News

18-07-2017

ಬೆಳಗಾವಿ: ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜನಿಯರ್, ಕಾರು ಚಾಲಕನಿಂದ ಬೂಟು ಸೇವೆ ಮಾಡಿಸಿಕೊಂಡಿರುವ ಅಮಾನವೀಯ ಘಟನೆ ಬೆಳಗಾವಿಯ ಖಾನಾಪುರದಲ್ಲಿ ಬೆಳಕಿಗೆ ಬಂದಿದೆ. ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆಯ ಕಾರ್ಯನಿರ್ವಾಹಕ ಎಂಜನಿಯರ್, ಕೃಷ್ಟೋಜಿ ರಾವ್ ಅವರ ಕಾರು ಚಾಲಕರಾಗಿದ್ದ ಗಣಪತಿ ಮದ್ಲಿಯವರನ್ನು ಈ ರೀತಿ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಕಳಸಾ ಕಾಮಗಾರಿ ಪರಿಶೀಲನೆ ವೇಳೆ ಕೆಸರಿನಲ್ಲಿ ಹೋಗಲು ಶೂ ಕಳಚಿದ್ದ ಕೃಷ್ಟೋಜಿರಾವ್ ಅವರು, ಅದನ್ನು ಸೇಫಾಗಿ ಕಾರಿನಲ್ಲಿಡುವಂತೆ ಸೂಚಿಸಿದ್ದು, ಅಧಿಕಾರಿ ಕಳಚಿದ ಶೂ ಕೈಯಲ್ಲಿ‌ಹಿಡಿದಕೊಂಡು ಹೋದ ಚಾಲಕ ಗಣಪತಿ ಮದ್ಲಿ ಕಾರಿನಲ್ಲಿಟ್ಟಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ಅಲ್ಪ ಮಟ್ಟಿನ ವಿರೋಧ ವ್ಯಕ್ತವಾಗಿದ್ದೂ, ಕೆಲಕಾಲ ಗೊಂದಲ ಸೃಷ್ಟಿಯಾಯಿತು. ಇದ್ಯಾವುದನ್ನು ಲೆಕ್ಕಿಸಿದ ಅಧಿಕಾರಿ ತಾನು ಮಾಡಿರುವ ಅಮಾನವೀಯ ಘಟನೆಯ ಬಗ್ಗೆ ಪರಿವೇ ಇಲ್ಲದೇ ತಮ್ಮ ಕಾರ್ಯ ಮುಂದುವರೆಸಿದರು. ವಿದ್ಯೆ,ಬುದ್ದಿ, ಅಧಿಕಾರ ಎಲ್ಲಾ ಇದ್ದರು ಇತರರನ್ನು ಮನುಷ್ಯರಂತೆ ಕಾಣಲು ಇರಬೇಕಾದ ಸಾಮಾನ್ಯ ಜ್ಞಾನವೇ ಇಲ್ಲದಿದ್ದರೇ ಎಂತಹ ಉತ್ತಮ ಸ್ಥಾನದಲ್ಲಿದ್ದರು ಪ್ರಯೋಜನವೇನು. ಈ ಕುರಿತು ಸಾಮಾಜಿಕ ವಲಯದಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ