ಕೊಳವೆ ಬಾವಿ ವಿಫಲ: ರೈತ ಸಾವು

Kannada News

18-07-2017

ಚಿತ್ರದುರ್ಗ: ಕೊಳವೆ ಬಾವಿಗಳನ್ನು ಕೊರೆಸುವಾಗ ನೀರು ಸಿಗದೇ ವಿಫಲವಾದ ಹಿನ್ನೆಲೆಯಲ್ಲಿ, ರೈತರೊಬ್ಬರು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ, ಚಿತ್ರದುರ್ಗದಲ್ಲಿ ನಡೆದಿದೆ. ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹುಲಿಕುಂಟೆ ಗ್ರಾಮದ ನರಸಿಂಹಯ್ಯ(55) ಮೃತ ರೈತ. ತಮ್ಮ ಜಮೀನಿನಲ್ಲಿ ಇವರು ಅಡಿಕೆ,ತೆಂಗು,ಈರುಳ್ಳಿ, ದಾಳಿಂಬೆ ಬೆಳೆಯುತ್ತಿದ್ದೂ, ನೀರಿಲ್ಲದೇ ಕಂಗಾಲಾಗಿದ್ದರು. ಇನ್ನು ಬೆಳೆಗಳ ರಕ್ಷಣೆಗಾಗಿ ರಾತ್ರಿ ೧೦ ಗಂಟೆ ಸುಮಾರಿನಲ್ಲಿ‌ ತನ್ನ ಜಮೀನಿನಲ್ಲಿ ೩ ಕೊಳವೆ ಬಾವಿಗಳನ್ನು ಕೊರೆಸುವಾಗ ಮೂರು ವಿಫಲವಾಗಿವೆ. ಇದರಿಂದ ಸ್ಥಳದಲ್ಲೆ ಕುಸಿದು ಸಾವನ್ನಪ್ಪಿದ್ದಾರೆ. ಚಳ್ಳಕೆರೆ ವಿಜಯಬ್ಯಾಂಕ್ ನಲ್ಲಿ ೫ ಲಕ್ಷ ಹಾಗು ಖಾಸಗಿ ವ್ಯಕ್ತಿಗಳಿಂದ ಸುಮಾರು ೬ ಲಕ್ಷ ರೂ ಸಾಲ‌ಪಡೆದಿದ್ದರು ಎಂದು ಹೇಳಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ