ವೇಗದ ಪೈಪೋಟಿಗೆ ವ್ಯಕ್ತಿ ಬಲಿ !

Kannada News

17-07-2017

ಬೆಂಗಳೂರು: ನಾಗರಬಾವಿಯ ವರ್ತುಲ ರಸ್ತೆಯಲ್ಲಿ  ಕೂಲಿ ಕೆಲಸಗಾರರನ್ನು ಕರೆದುಕೊಂಡು, ಪೈಪೋಟಿಯ ಮೇಲೆ ಹೋಗುತ್ತಿದ್ದ ಎರಡು ಟೆಂಪೋಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, 13 ಮಂದಿ ಗಾಯಗೊಂಡಿರುವ ದುರ್ಘಟನೆ ನಗರದಲ್ಲಿಂದು ನಡೆದಿದೆ. ಮೃತರನ್ನು ಗುಲ್ಬರ್ಗ ಮೂಲದ ಕಾಂಕ್ರೀಟ್ ಕೆಲಸಗಾರ ನಾಗಪ್ಪ (35)ಎಂದು ಗುರುತಿಸಲಾಗಿದೆ, ಗಾಯಗೊಂಡಿರುವ 13 ಮಂದಿಯನ್ನು ಚಂದ್ರ ಲೇಔಟ್ ನ ನಿರ್ಮಾಣ ಹಂತದ ಕಟ್ಟಡಕ್ಕೆ ಕಾಂಕ್ರೀಟ್ ಹಾಕಲು ಎರಡು ಟೆಂಪೋಗಳಲ್ಲಿ 15 ಮಂದಿ ಕೂಲಿ ಕೆಲಸಗಾರರನ್ನು ಕರೆದುಕೊಂಡು ಬೆಳಿಗ್ಗೆ 9ರ ವೇಳೆ ಹೋಗಲಾಗುತ್ತಿತ್ತು. ಮೊದಲು ಯಾರು ಹೋಗಬೇಕೆಂದು ಪೈಪೋಟಿಯ ಮೇಲೆ ಚಾಲಕರು ಟೆಂಪೋ ಚಲಾಯಿಸಿಕೊಂಡು ಹೋಗಿ ರಿಂಗ್ ರಸ್ತೆಯ ತೆರಿಗೆ ಭವನದ ಬಳಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡೂ ಟೆಂಪೋಗಳಲ್ಲಿದ್ದ 13 ಮಂದಿ ಗಾಯಗೊಂಡು, ನಾಗಪ್ಪ ಸ್ಥಳದಲ್ಲೇ ಮೃತಪಟ್ಟರು. ಪ್ರಕರಣ ದಾಖಲಿಸಿರುವ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು, ಟೆಂಪೋ ಚಾಲಕರನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ