ಬೈಕ್ ಡಿಕ್ಕಿಗೆ ಭಿಕ್ಷುಕ ಬಲಿ !

Kannada News

17-07-2017

ಬೆಂಗಳೂರು: ನಗರದ ಗಾರೆಬಾವಿಪಾಳ್ಯದ ಬೊಮ್ಮನಹಳ್ಳಿ ರಸ್ತೆಯ ಮೇಲುಸೇತುವೆ ಬಳಿ, ಕಳೆದ ರಾತ್ರಿ ಅತೀ ವೇಗವಾಗಿ ಹೋಗುತ್ತಿದ್ದ ದುಬಾರಿ 400ಸಿಸಿ ಡಾಮಿನರ್ ಬೈಕ್ ಡಿಕ್ಕಿ ಹೊಡೆದು ಭಿಕ್ಷುಕರೊಬ್ಬರು ಮೃತಪಟ್ಟರೆ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಭಿಕ್ಷುಕ 52 ವರ್ಷದವರಾಗಿದ್ದು, ಅವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದುಬಂದಿಲ್ಲ. ಬೈಕ್ ಸವಾರ ಬಿಸ್ವ ರಂಜಿತ್ ಶಾಹು (27) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒರಿಸ್ಸಾ ಮೂಲದ ಬಿಸ್ವ ರಂಜಿತ್ ಶಾಹು ಅವರು ರಾತ್ರಿ 9ರ ವೇಳೆ ಕೆಲಸ ಮುಗಿಸಿಕೊಂಡು 400ಸಿಸಿ ಡಾಮಿನರ್ ಬೈಕ್‍ನಲ್ಲಿ ವೇಗವಾಗಿ ಹೋಗುತ್ತಾ, ಬೊಮ್ಮನಹಳ್ಳಿಯ ಮೇಲುಸೇತುವೆ ಬಳಿ ಭಿಕ್ಷುಕನಿಗೆ ಡಿಕ್ಕಿ ಹೊಡೆದು, ತಾನೂ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ನೋಡಿದ ಸ್ಥಳೀಯರು ಧಾವಿಸಿ ಶಾಹುನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕರಣ ದಾಖಲಿಸಿರುವ ಮಡಿವಾಳ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ