ಪಾರ್ಕ್ ನಲ್ಲಿ ವ್ಯಕ್ತಿ ಆತ್ಮಹತ್ಯೆ !

Kannada News

17-07-2017

ಬೆಂಗಳೂರು: ನಗರದ ಕೊಡುಗೆಹಳ್ಳಿಯ ಕೆನರಾ ಬ್ಯಾಂಕ್ ಲೇಔಟ್‍ನ ಪಾರ್ಕ್‍ನಲ್ಲಿನ ಏಣಿ ಕಂಬಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸರಿಯಾದ ಕಡೆ ಕೆಲಸ ಸಿಗದಿದ್ದರಿಂದ ನೊಂದ ಕಾರು ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ನಂದಿನಿ ಲೇಔಟ್ ನ ಮರಿಸ್ವಾಮಿ (54) ಎಂದು ಗುರುತಿಸಲಾಗಿದೆ. ಕೆನರಾ ಬ್ಯಾಂಕ್ ಲೇಔಟ್ ಸೊಸೈಟಿಯಲ್ಲಿ 20 ವರ್ಷಗಳ ಕಾಲ ಉದ್ಯೋಗಿಯಾಗಿದ್ದ ಅವರನ್ನು ನಾಲ್ಕು ವರ್ಷಗಳ ಹಿಂದೆ ಕೆಲಸದಿಂದ ತೆಗೆಯಲಾಗಿತ್ತು. ಅಲ್ಲಿಂದ ಕಾರು ಚಾಲಕನಾಗಿ ಕೆಲಸಕ್ಕೆ ಹೋಗುತ್ತಿದ್ದ ಮರಿಸ್ವಾಮಿ ಸರಿಯಾದ ಕಡೆ ಕೆಲಸ ಸಿಗದಿದ್ದರಿಂದ ನೊಂದು ಮಧ್ಯಾಹ್ನ 3.30ರ ವೇಳೆ ಕೆನರಾ ಬ್ಯಾಂಕ್ ಲೇಔಟ್ ನ, ಪಾರ್ಕ್ ನಲ್ಲಿ ಹಾಕಿದ್ದ ಏಣಿಯ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಡುಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ