ಕಾರು ಹರಿದು ಮಗು ಸಾವು !

Kannada News

17-07-2017

ಬೆಂಗಳೂರು:ನಗರದ ಮೂಡಲಪಾಳ್ಯದಲ್ಲಿನ ಕಾವೇರಿ ಲೇಔಟ್‍ನಲ್ಲಿ ಆಟವಾಡಲು ಮನೆಯಿಂದ ಹೊರಗೋಡಿ ಬಂದ ಮಗುವಿನ ಮೇಲೆ, ವೇಗವಾಗಿ ಬಂದ ಇನೋವಾ ಕಾರು ಹರಿದು ಮಗು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಮೃತಪಟ್ಟ ಮಗುವನ್ನು ಕಾವೇರಿ ಲೇಔಟ್‍ನ ಕಾರು ಚಾಲಕ ಮಹಂತೇಶ್ ಅವರ ಪುತ್ರ, ನಾಲ್ಕುವರೆ ವರ್ಷದ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನ 12ರ ವೇಳೆ  ಕಾವೇರಿ ಲೇಔಟ್‍ನ ಮನೆಯಿಂದ ಆಟವಾಡಲು ಪವನ್ ಕುಮಾರ್ ಹೊರಗೋಡಿ ಬಂದಿದ್ದಾನೆ. ಏಕಾಏಕಿ ಆತ ಬಂದಿದ್ದರಿಂದ ಅದೇ ಮಾರ್ಗವಾಗಿ ಬಂದ ಇನೋವಾ ಕಾರು ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತವೆಸಗಿದ ಕಾರು ಚಾಲಕ ವೆಂಕಟೇಶ್ ಮೂರ್ತಿಯನ್ನು ಬಂಧಿಸಿರುವ ವಿಜಯನಗರ ಸಂಚಾರ ಪೊಲೀಸ್ ಇನ್ಸ್ ಪೆಕ್ಟರ್ ಶಿವಶಂಕರ್ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಶೋಭಾ ರಾಣಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಕಾರು ಹರಿದು ಮಗು ಸಾವು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ