ಗಾಂಜಾ ಪ್ರಕರಣದ ಖೈದಿ ಸಾವು !

Kannada News

17-07-2017

ಮಂಗಳೂರು: ಗಾಂಜಾ ಪ್ರಕರಣದಲ್ಲಿ ಬಂಧನವಾಗಿದ್ದ ಖೈದಿಯೊಬ್ಬರು ಅನಾರೋಗ್ಯದ ಕಾರಣ ಮೃತಪಟ್ಟಿರುವ ಘಟನೆ, ಮಂಗಳೂರಿನಲ್ಲಿ ನಡೆದಿದೆ. ಗಾಂಜಾ ಪ್ರಕರಣದಲ್ಲಿ ಬಂಧನವಾಗಿದ್ದ, ಕಾಸರಗೋಡಿನ ಉದಯಕುಮಾರ್ ರೈ (32) ಮೃತ ಖೈದಿ. ಮಂಗಳೂರಿನ ಕಾರಗೃಹದ ಖೈದಿಯಾಗಿದ್ದ ಇವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇನ್ನು ತೀವ್ರ ಅನಾರೋಗ್ಯ ಕಾರಣ, ಜಿಲ್ಲೆಯ ವೆನ್ಲಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಖೈದಿ ಮೃತಪಟ್ಟಿದ್ದಾರೆ. ಖೈದಿಯು ಉರ್ವ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇದೀಗ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ