ನಕಲಿ ಚಿನ್ನ ಅಡವಿಟ್ಟು ಆತ್ಮಹತ್ಯೆ !

Kannada News

17-07-2017

ಉಡುಪಿ: ಕಳೆದ ಜುಲೈ 13 ರಂದು ಉಡುಪಿಯ ಪಡುಬೆಳ್ಳೆಯಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ, ಪತಿ ಸೇರಿದಂತೆ ಪತ್ನಿ ಹಾಗೂ ಇಬ್ಬರು ಪುತ್ರಿಯರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನಕಲಿ ‌ಚಿನ್ನ ಅಡವಿಟ್ಟು ಸಾಲ ತೆಗೆದಿದ್ದೇ ಆತ್ಮಹತ್ಯೆಗೆ ಕಾರಣ? ಎಂದು ಹೇಳಲಾಗುತ್ತಿದೆ. ಸಹಕಾರಿ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಇರಿಸಿದ್ದ ಶಂಕರ ಆಚಾರ್ಯ, ಇನ್ನಂಜೆ ಸಹಕಾರಿ ವ್ಯವಸಾಯಿಕ ಬ್ಯಾಂಕ್ ನ ಕುಂಜಾರುಗಿರಿ ಶಾಖೆಯಲ್ಲಿ ಮೂರು ಕೆಜಿ ನಕಲಿ ಚಿನ್ನ ಅಡವಿಟ್ಟು, ಸುಮಾರು 64 ಲಕ್ಷ ಸಾಲ ಪಡೆದಿದ್ದರು. ಇದರಿಂದ ತೊಂದರೆಗೆ ಸಿಕ್ಕಿಹಾಕಿಕೊಳ್ಳುವ ಭಯ ಅವರನ್ನು ಕಾಡುತ್ತಿದ್ದೂ, ಇಷ್ಟಾಗಿಯೂ ಶಂಕರ್ ಆಚಾರ್ಯ ಅವರ ಆರ್ಥಿಕ ಸ್ಥಿತಿ ಸುಧಾರಿಸದೇ, ಆರ್ಥಿಕ ಮುಗ್ಗಟ್ಟಿನಿಂದ ಸಾವಿಗೆ ನಿರ್ಧರಿಸಿದ್ದೂ, ಪತ್ನಿ ಹಾಗೂ ಇಬ್ಬರು ಪುತ್ರಿಯರ ಸಹಿತ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಉಮೇಶ್ ಅಮೀನ್, ಸರಾಫ ಉಮೇಶ್ ಆಚಾರ್ಯ ಅವರನ್ನು ಬಂಧಿಸಿರುವ ಶಿರ್ವ ಪೊಲೀಸರಿಂದ ತನಿಖೆ ಮುಂದುವರೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ