ಆಸ್ಪತ್ರೆಯಲ್ಲಿ ನಾಗರಹಾವು ಪ್ರತ್ಯಕ್ಷ

Kannada News

17-07-2017

ಮೈಸೂರು: ಆಸ್ಪತ್ರೆಯಲ್ಲಿ ವಿಷಕಾರಿ ನಾಗರಹಾವು ಪ್ರತ್ಯಕ್ಷವಾಗಿದ್ದೂ, ಹಾವು ಕಂಡು ರೋಗಿಗಳು ಗಾಬರಿಗೊಂಡಿರುವ ಘಟನೆ, ಮೈಸೂರಿನ ಕೆ.ಆರ್.ಎಸ್. ರಸ್ತೆಯಲ್ಲಿರುವ ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ ನಡೆದಿದೆ. ಸುಮಾರು 60 ಮಂದಿ ರೋಗಿಗಳು ದಾಖಲಾಗಿರುವ ಕೋಣೆಯಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ರೋಗಿಯೊಬ್ಬರ  ಔಷಧಿಗಳನ್ನು ಇಡುವ ಕಬೋರ್ಡ್ ನ ಒಳಗೆ ಅಡಗಿಕೊಂಡಿದ್ದು, ಕೆಲಕಾಲ ಆತಂಕ ಸೃಷ್ಟಿಸಿತ್ತು. ಇನ್ನು ಈ ನಾಗರಹಾವು 5 ಅಡಿ ಉದ್ದವಿದ್ದು ನೋಡುಗರಿಗೆ ಭಯ ಹುಟ್ಟಿಸುವಂತಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಉರಗತಜ್ಞ ರಮೇಶ್  ಕಬೋರ್ಡ್ ನಲ್ಲಿದ್ದ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಹಾವು ಹಿಡಿದ ಬಳಿಕ ರೋಗಿಗಳು ನಿರಾಳರಾದರು. ಆಸ್ಪತ್ರೆಗೆ ಹಾವು ಬರಲು ಕಾರಣವಾಗಿರುವ ಅವ್ಯವಸ್ಥೆಗಳ ವಿರುದ್ಧ ರೋಗಿಗಳು, ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ