ರಾಷ್ಟ್ರಪತಿ ಚುನಾವಣೆ ಬಿರುಸಿನ ಮತದಾನ !

Kannada News

17-07-2017

ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದಲ್ಲಿ ಸಿಟಿ ರವಿ ಮೊದಲ ಮತದಾನ ಮಾಡಿದ್ದಾರೆ. ಅಲ್ಲದೇ ಅಪ್ಪಚ್ಚು ರಂಜನ್, ಆನಂದ್ ಸಿಂಗ್ ಕೂಡ ಮತದಾನ ಮಾಡಿದ್ದಾರೆ. ಇನ್ನು ವಿಧಾನಸೌದದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದ್ದೂ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಮೀರಾಕುಮಾರ್ ಗೆ ಮತಹಾಕುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಪಕ್ಷದ ಶಾಸಕರಿಗೆ ಸಿಎಂ ಕಟ್ಟು ನಿಟ್ಟು ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಅಡ್ಡಮತದಾನ ಮಾಡದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಲ್ಲ ಶಾಸಕರು ಮತದಾನ ಮಾಡುವಂತೆ ಸೂಚಿಸಿದ್ದೂ, ಬಿರುಸಿನಿಂದ ನಡೆಯುತ್ತಿರುವ ಮತದಾನ. ಬಿಜೆಪಿಯ ಸಿಟಿ ರವಿ,ಅಪ್ಪಚ್ಚು ರಂಜನ್, ಜೀವರಾಜ್,ರಾಮಕ್ಕ, ಶಶಿಕಲಾ ಜೊಲ್ಲೆ, ಆರ್.ಅಶೋಕ್, ಸುರೇಶ್ ಕುಮಾರ್, ಲಕ್ಷ್ಮಣ್ ಸವದಿ,ಮತದಾನ ಮಾಡಿದ್ದೂ, ಇನ್ನು ಕಾಂಗ್ರೆಸ್ ನಿಂದ ಸಚಿವರಾದ ಕಾಗೋಡು ತಿಮ್ಮಪ್ಪ, ಉಮಾಶ್ರೀ,ರಮಾನಾಥ್ ರೈ, ಆರ್.ವಿ.ದೇಶಪಾಂಡೆ, ಮಾಲಿಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್,ಆಂಜನೇಯ, ಕೆ.ಎನ್.ರಾಜಣ್ಣ, ವಾಸು, ಕಳಲೆ ಕೇಶವಮೂರ್ತಿ,ಮತದಾನ ಮಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ