ಆತ್ಮಸ್ಥೈರ್ಯ ತುಂಬಲು ಜಾಥಾ !

Kannada News

17-07-2017

ಕೊಪ್ಪಳ: ಪೊಲೀಸರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಹಾಗೂ ಪರಿಸರ ಕಾಳಜಿ ಮೂಡಿಸುವ ವಿವಿಧ ಉದ್ದೇಶಗಳಿಂದ ಸುಮಾರು, 1756 ಕಿ.ಮೀ ಜಾಥಾ ಹಮ್ಮಿಕೊಂಡಿದೆ. ಕೆ.ಎಸ್.ಆರ್.ಪಿ ಎಡಿಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ ನಡೆಯುತ್ತಿರುವ ಜಾಥಾ ಇದಾಗಿದ್ದು, ಈಗಾಗಲೇ ಕೊಪ್ಪಳಕ್ಕೆ ಕರ್ನಾಟಕ ದರ್ಶನ ಜಾಥಾ ಆಗಮಿಸಿದೆ. ಒಟ್ಟು 1756 ಕಿ.ಮೀ. ಜಾಥಾ ಹಾಗೂ ೧೫ ದಿನಗಳ ಸೈಕಲ್ ಜಾಥಾ ಹಮ್ಮಿಕೊಂಡಿದ್ದೂ, ಬೀದರ್ ನಿಂದ ಆರಂಭವಾಗಿ ಬೆಂಗಳೂರು ತಲುಪಲಿರುವ ಜಾಥಾ ಕಾರ್ಯಕ್ರಮ ಇದಾಗಿದೆ. ಕೆ.ಎಸ್.ಆರ್.ಪಿ ಎಡಿಜಿಪಿ ಭಾಸ್ಕರ್ ರಾವ್ ನೇತೃತ್ವದ ೫೨ ಜನರ ತಂಡ ಇದೀಗ ಕೊಪ್ಪಳಕ್ಕೆ ಆಗಮಿಸಿದೆ. ೧೪ ಕೆ.ಎಸ್.ಆರ್.ಪಿ ಬೆಟಾಲಿಯನ್ ತಂಡದಿಂದ, ಪ್ರತೀ ತಂಡಕ್ಕೆ ಇಬ್ಬರಂತೆ ಆಯ್ಕೆ ಮಾಡಲಾಗಿತ್ತು. ಪೋಲಿಸರ ಫಿಟ್ನೆಸ್ ಹಾಳಾಗಲು ಮೇಲಾಧಿಕಾರಿಗಳೇ ಕಾರಣ, ಫಿಸಿಕಲ್ ಫಿಟ್ನೆಸ್ ಗಿಂತ ಮೆಂಟಲ್ ಫಿಟ್ ಆಗಬೇಕಾಗಿದೆ ಪೊಲೀಸರು. ಫಿಟ್ನೆಸ್ ಗೆ ಟೈಮ್ ಕೊಡದೇ ಹೆಚ್ಚಿಗೆ ಕೆಲಸ ಮಾಡಿಸುತ್ತೇವೆ. ಹೀಗಾಗಿ ಪೊಲೀಸರು ಊಟ ಮಾಡಿ ಮಲಗುವದರಿಂದ ಫ್ಯಾಟ್ ಜಾಸ್ತಿ ಆಗುತ್ತಿದೆ. ಇದಕ್ಕೆ ಆಯಾ ಜಿಲ್ಲೆಯ ಎಸ್.ಪಿ ಗಮನ ಹರಿಸಬೇಕು ಎಂದರು. ಭಿನ್ನಾಭಿಪ್ರಾಯಗಳು ಎಲ್ಲೆಡೆ ಇದ್ದೆ ಇರತ್ತೆ. ಆದರೆ ಕೆಲವೊಮ್ಮೆ ಹೊರಗಡೆ ಬರತ್ತೆ. ನಮ್ಮ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹಾಗೆ ನಡೆದುಕೊಳ್ಳಬೇಕು ಎಂದು ಕೊಪ್ಪಳದಲ್ಲಿ ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ