ಶಾಸಕರ ಅಸಮಾಧಾನ ಶಮನಕ್ಕೆ ಯತ್ನ !

Kannada News

17-07-2017

ಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆಗೆ ಕಾಂಗ್ರೆಸ್ ಶಾಸಕರ ಅಸಮಾಧಾನ ವಿಚಾರವಾಗಿ, ಕೆಪಿಸಿಸಿ ಅಧ್ಯಕ್ಷ  ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಶಾಸಕರಿಗೆ ಪಕ್ಷದ ಕೆಲಸದ ಹೊರೆ ಬೀಳುವುದು ಬೇಡ ಎಂದು ಪದಾಧಿಕಾರಿಗಳ ಪಟ್ಟಿಯಲ್ಲಿ ಶಾಸಕರಿಗೆ ಸ್ಥಾನ ನೀಡಿಲ್ಲ, ಇದನ್ನು ಸ್ವತಹ ಹೈಕಮಾಂಡ್ ಸೂಚಿಸಿತ್ತು ಎಂದಿದ್ದಾರೆ. ಪದಾಧಿಕಾರಿಗಳಾಗಲು ಶಾಸಕರು ಯಾರು ಅಸಮರ್ಥರು ಅಂತಾ ಹೀಗೆ ಮಾಡಿಲ್ಲ. ಕ್ಷೇತ್ರಗಳಲ್ಲಿ ಶಾಸಕರು ಕೆಲಸ ಮಾಡಲಿ, ಮುಂದೆ ಲೋಕಸಭೆ ಚುನಾಚಣೆ ಬಂದಾಗ ಶಾಸಕರಿಗೆ ಹೆಚ್ಚು ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಬಹುದು ಎಂದರು. ಇನ್ನು ಈ ವಿಚಾರವಾಗಿ ವಿಧಾನ ಸೌಧದಲ್ಲಿಂದು ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್.ಆಂಜನೇಯ, ಎಲ್ಲರಿಗೂ ಪಕ್ಷದಲ್ಲಿ ಸ್ಥಾನ ನೀಡಿದ್ದೇವೆ, ಪಕ್ಷದಲ್ಲಿ ಸಣ್ಣ ಪುಟ್ಟ ಅಸಮಾಧಾನ ಇದ್ದಲ್ಲಿ ಬಗೆಹರಿಸಿಕೊಳ್ಳುತ್ತೇವೆ, ಬಹಿರಂಗವಾಗಿ ಹೇಳಿಕೆ ನೀಡುವಷ್ಟು ಪಕ್ಷದಲ್ಲಿ ದೊಡ್ಡ ಸಮಸ್ಯೆಗಳಿಲ್ಲ ಎಂದರು. ಇನ್ನು ರಾಷ್ಟಪತಿ ಚುನಾವಣೆ ವಿಚಾರವಾಗಿ ಮಾತನಾಡಿ ಅವರು, ಮಾಜಿ ಉಪ ಪ್ರಧಾನಮಂತ್ರಿ ಬಾಬು ಜಗಜೀವನ್ ರಾಮ್ ಪುತ್ರಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ, ಜಾತಿ ವ್ಯವಸ್ಥೆಯಿಂದ ಬಾಬು ಜಗಜೀವನ್ ರಾಮ್ ಅಧಿಕಾರಕ್ಕೆ ಬಂದಿರಲಿಲ್ಲ, ಅವರ ಮಗಳಿಗೆ ಮತ ಹಾಕುವ ಒಳ್ಳೆಯ ಬುದ್ಧಿಯನ್ನು ದೇವರು ಎಲ್ಲರಿಗೂ ನೀಡಲಿ ಎಂದರು. ಮೀರಾ ಕುಮಾರ್ ಒಳ್ಳೆಯ ಸಂಸದೀಯ ಪಟು ಅವರು ರಾಷ್ಟ್ರಪತಿಯಾಗುವಂತಾಗಲಿ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ