ಇಬ್ಬರು ವೈದ್ಯಾಧಿಕಾರಿಗಳ ಅಮಾನತು !

Kannada News

17-07-2017

ಕೋಲಾರ: ಕರ್ತವ್ಯಲೋಪ ಅರೋಪ ಸಾಭೀತಾದ ಹಿನ್ನೆಲೆಯಲ್ಲಿ, ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸೇರಿದಂತೆ ಇಬ್ಬರು ಮೆಡಿಕಲ್ ಅಫೀಸರ್ ಗಳನ್ನು ಅಮಾನತು ಮಾಡಿರುವ ಘಟನೆ, ಕೋಲಾರದ ಜಿಲ್ಲೆ ಮಾಲೂರಿನ ನಲ್ಲಿ ನಡೆದಿದೆ. ಜಿಲ್ಲೆಯ ಸಾರ್ವಜನಿಕ  ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಸನ್ನ ಕುಮಾರ್, ಸೀನಿಯರ್ ಮೆಡಿಕಲ್ ಆಫೀಸರ್ ಡಾ.ರವಿ ಶಂಕರ್, ಕಿರಿಯ ಫಾರ್ಮಾಸಿಸ್ಟ್ ನೀಲಮ್ಮ ಅಮಾನತಾಗಿರುವ ಅಧಿಕಾರಿಗಳು. ಅರೋಗ್ಯ ಮತ್ತು ಕುಟುಂಬ ಕಲ್ಯಾಣ  ಸೇವೆಗಳ ಅಯುಕ್ತ ಸುಭೋದ್ ಯಾದವ್ ಅವರು ಆದೇಶ ನೀಡಿದ್ದಾರೆ. ರೋಗಿಗಳಿಂದ ಅಕ್ರಮವಾಗಿ ಹಣ ಪಡೆಯುತ್ತಿದ್ದು, ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ದಾಸ್ತಾನು ಇದ್ದರು ಖಾಸಗಿ ಮೆಡಿಕಲ್ ಶಾಪ್ ಗಳಿಗೆ ಚೀಟಿ ಬರೆದು ಕೊಡುತ್ತಿದ್ದರು ಎನ್ನುವ ಆರೋಪ ಈ ಅಧಿಕಾರಿಳ ಮೇಲೆ ಕೇಳಿಬಂದಿತ್ತು, ಇದೀಗ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಿಲಾಗಿದೆ ಎಂದು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ