ಮಾರಕಾಸ್ತ್ರಗಳಿಂದ ರೌಡಿ ಮೇಲೆ ಹಲ್ಲೆ !

Kannada News

17-07-2017 576

ಮಂಡ್ಯ: ಮದ್ದೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರೆದಿದೆ. ರೌಡಿ ಶೀಟರ್ ಮೇಲೆ ಮತ್ತೊಂದು ರೌಡಿಗಳ ಗುಂಪು ಹಲ್ಲೆ ನಡೆಸಿದ್ದಾರೆ. ಲಾಂಗ್, ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದೂ, ಮದ್ದೂರಿನ ಪಟ್ಟಣದ ಕಸ್ತೂರಬಾ ಶಾಲೆ ಬಳಿ ಘಟನೆ ನಡೆದಿದೆ. ಪಟ್ಟಣದ ರೌಡಿ ಶೀಟರ ವರುಣ್(21) ತೀವ್ರವಾಗಿ ಗಾಯಗಳಾಗಿದ್ದೂ, ಘಟನೆಯಲ್ಲಿ ವರುಣ್ ಬಲ ಕೈ ತುಂಡರಿಸಿದೆ ಮತ್ತು ತಲೆಗೆ ತೀವ್ರ ಗಾಯಗಳಾಗಿವೆ. ಸೂರಜ್, ಅಕ್ಷಯ್ ಅಲಿಯಾಸ್ ವ್ಯಾಸ, ಸುಹಾಸ್, ಶಿವರಾಜ್ ಅಲಿಯಾಸ್ ಪುಟಾಣಿ, ರಾಜೇಶ್, ಗಿರಿ ಅಲಿಯಾಸ್  ದಾಸ, ವಿನಯ್ ಅಲಿಯಾಸ್ ಮಾಮ ಎಂಬುವವರಿಂದ ಹಲ್ಲೆ ನಡೆದಿದೆ. ಬೈಕ್ ಮತ್ತು ಮಾರುತಿ ವ್ಯಾನ್ ನಲ್ಲಿ ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಗಾಯಾಳು ವರುಣ್ ನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ತನಿಖೆ ಕೈಗೊಂಡಿದ್ದಾರೆ. ಹಲ್ಲೆಗೊಳಗಾದ ವರುಣ್ ಒಂದೂವರೆ ತಿಂಗಳ ಹಿಂದೆ ವ್ಯಕ್ತಿಯೊಬ್ಬರ ಹತ್ಯೆಗೆ ಯತ್ನಿಸಿ, ಜೈಲಿಗೆ ಹೋಗಿದದ್ದೂ, ಇತ್ತೀಚೆಗೆಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದರು. ಅಷ್ಟರಲ್ಲೇ ಮತ್ತೊಂದು ಗುಂಪಿನಿಂದ ಹಲ್ಲೆಗೆ ಒಳಗಾಗಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ