ಮನಸಿಲ್ಲದ ಮನಸ್ಸು…

Kannada News

15-07-2017 612

ಕೆಲವು ದಿನಗಳ ಹಿಂದೆ ಝೀ ಟಿವಿಯ ಜನಪ್ರಿಯ ಕಾರ್ಯಕ್ರಮ ವೀಕ್ ಎಂಡ್ ವಿತ್ ರಮೇಶ್ ರಿಯಾಲಿಟಿ ಶೋ ನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸಿದ್ದರು. ಎರಡು ಕಂತುಗಳಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಲವಲವಿಕೆಯಿಂದಲೇ ಪಾಲ್ಗೊಂಡಿದ್ದರು. ಸಾಮಾನ್ಯವಾಗಿ ಈ ಕಾರ್ಯಕ್ರಮದ ಅತಿಥಿಗಳಾಗಿ ಬರುವವರೆಲ್ಲರೂ ಒಂದಲ್ಲಾ ಒಂದು ಭಾವನಾತ್ಮಕ ಕಾರಣಕ್ಕಾಗಿ ಕಣ್ಣೀರು ಹಾಕುತ್ತಾ, ರಮೇಶ್ ಅರವಿಂದ್ ಅವರ ಬಳಿ, ಕರ್ಚೀಫ್ ಪಡೆದು ಕಣ್ಣೊರಿಸಿಕೊಳ್ಳುವುದನ್ನು ವೀಕ್ಷಕರು ನೋಡಿದ್ದಾರೆ. ಆದರೆ, ತಮ್ಮ ಮಗ ರಾಕೇಶ್ ಸಾವಿನ ಪ್ರಸ್ತಾಪ ಆದಾಗಲೂ ಕೂಡ, ಸಿದ್ದರಾಮಯ್ಯನವರು ಸ್ಥಿತಪ್ರಜ್ಞರಾಗಿಯೇ ಇದ್ದರು. ಹೀಗಿದ್ದರೂ ಕೂಡ, ಈ ಶೋನಲ್ಲಿ ಭಾಗವಹಿಸಲು ಸಿದ್ದರಾಮಯ್ಯನವರಿಗೆ ಸ್ವಲ್ಪವೂ ಆಸಕ್ತಿಯೇ ಇರಲಿಲ್ಲವಂತೆ. ಆದರೆ, ಕೆಲವರು ಹಿತೈಷಿಗಳು ಮತ್ತು ಪತ್ರಕರ್ತರು ಇವರನ್ನು ಒಪ್ಪಿಸಲು ಹರಸಾಹಸ ಮಾಡಿದರಂತೆ. ಅವರೆಲ್ಲರ ಒತ್ತಾಯಕ್ಕೆ ಕಟ್ಟುಬಿದ್ದ ಸಿದ್ದರಾಮಯ್ಯನವರು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡರಂತೆ. ಅದರ ಜೊತೆಗೆ, ಮುಂದಿನ ವಿಧಾನಸಭೆ ಚುನಾವಣೆಯ ದಿನಗಳು ಹತ್ತಿರ ಬರುತ್ತಿರುವುದರಿಂದ, ಈ ಕಾರ್ಯಕ್ರಮದ ಮೂಲಕ ರಾಜ್ಯದ ಜನತೆಗೆ ಇನ್ನೊಂದಿಷ್ಟು ಹತ್ತಿರವಾಗಬಹುದು, ಆಪ್ತತೆ ಬೆಳೆಸಿಕೊಳ್ಳಬಹುದು ಮತ್ತು ಅದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಬಹುದು ಎಂಬ ಲೆಕ್ಕಾಚಾರವೂ ಇಲ್ಲಿ ಕೆಲಸ ಮಾಡಿದೆ ಎನ್ನಲಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ