ಗರ್ಭಪಾತ ಮಾಡಿಸಿದ ದುಷ್ಟ ಪತಿ !

Kannada News

15-07-2017

ಬೆಳಗಾವಿ: ಬೆಳಗಾವಿಯಲ್ಲಿ ಪತಿಯಿಂದಲೇ ಪತ್ನಿಯ ಗರ್ಭಪಾತ  ಮಾಡಿಸಿರುವ ದಾರುಣ ಘಟನೆ ನಡೆದಿದೆ. ತಾಯಿಯೊಂದಿಗೆ ಸೇರಿ ಪತ್ನಿಯನ್ನು‌ ಪುಸಲಾಯಿಸಿ ಗರ್ಭಪಾತ ಮಾಡಿಸಿರುವುದು ಬೆಳಕಿಗೆ ಬಂದಿದೆ. ೬ ತಿಂಗಳ ಗರ್ಭಿಣಿ ವಾಣಿ ಗರ್ಭಪಾತಕ್ಕೆ ಒಳಗಾದ ಮಹಿಳೆ. ಪತ್ನಿಯನ್ನು ಪುಸಲಾಯಿಸಿ‌ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೃತ್ಯ ಎಸಗಿದ್ದಾನೆ. ನೊಂದ ಪತ್ನಿಯು, ಪತಿಯ ವಿರುದ್ಧ ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪತ್ನಿ ದೂರು ದಾಖಸಿದ್ದಾರೆ. ಇಷ್ಟರಲ್ಲಾಗಲೇ ಪತ್ನಿಯಾದ ಸಿದ್ದಪ್ಪಾ ಚರಗಣವಿ ಪರಾರಿಯಾಗಿದ್ದೂ, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನೊಂದ‌ ಮಹಿಳೆ ವಾಣಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ