ಶೋರೂಂ ಶೆಟರ್ ಮುರಿದು ದರೋಡೆ !

Kannada News

15-07-2017

ವಿಜಯಪುರ: ಶೆಟರ್ ಮುರಿದು ರೇಮೆಂಡ್ ಶಾಪ್ ದರೋಡೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಸುಮಾರು 13ಕ್ಕೂ ಹೆಚ್ಚು ಕಳ್ಳರಿದ್ದ ತಂಡ ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ. ಮುಖಕ್ಕೆ ಬಟ್ಟೆ ಸುತ್ತಿಕೊಂಡು ದರೋಡೆಗೆ ಬಂದ ಕಳ್ಳರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶೋರೂಂ ನ ಶೆಟರ್ ಮುರಿದು 3 ಲಕ್ಷಕ್ಕೂ ಅಧಿಕ ಹಣ ದೋಚಿ ಪರಾರಿಯಾಗಿದ್ದಾರೆ. ಜಿಲ್ಲೆಯ ಸಿದ್ದೇಶ್ವರ ದೇವಸ್ಥಾನದ ಬಳಿ, ಗುರುಕಲ ರಸ್ತೆಯ ರೇಮೆಂಡ್ಸ್ ಶೋರೂಂ ನಲ್ಲಿ ಖದೀಮರ ಕೈಚಳಕ ತೋರಿಸಿದ್ದೂ, ಕಳ್ಳತನದ ದೃಶ್ಯಗಳು ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿವೆ. ಸಿಸಿ ಕ್ಯಾಮಾರಾ ನೋಡಿ ಮುಖಕ್ಕೆ ಬೆಡ್ ಶೀಟ್ ಹಾಕಿಕೊಂಡು ಶಟರ್ ಮುರಿದು ಲೂಟಿ ಮಾಡಿದ್ದಾರೆ. ಇನ್ನು ವಿಚಾರ ತಿಳಿದು ದೌಡಾಯಿಸಿದ ಗಾಂಧಿಚೌಕ ಪೊಲೀಸರು, ಅಂಗಡಿ ಮಾಲೀಕರಿಂದ ಮಾಹಿತಿ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಬೆರಳಚ್ಚು ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ