ಅಕ್ರಮ ಕಸಾಯಿಖಾನೆ ಗೋವುಗಳ ರಕ್ಷಣೆ !

Kannada News

15-07-2017

ಕೊಪ್ಪಳ: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, 120 ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿದ್ದಾರೆ. ಕೊಪ್ಪಳದ ಗಂಗಾವತಿಯ, ಭಗತ್ ಸಿಂಗ್ ನಗರದಲ್ಲಿರುವ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 120 ಕ್ಕೂ ಹೆಚ್ಚು ಗೋವುಗಳು ಕಸಾಯಿಖಾನೆಯಲ್ಲಿರುವುದು ಕಂಡು ಬಂದಿದ್ದೂ, ಗೋವುಗಳನ್ನು ರಕ್ಷಣೆ ಮಾಡಿ, ಗೋಶಾಲೆಗೆ ಸಾಗಿಸಿದ್ದಾರೆ. ಪೊಲೀಸರು ದಾಳಿ ಮಾಡುತ್ತಿದ್ದಂತೇ ಕಸಾಯಿಖಾನೆ ಮಾಲೀಕರು ಪರಾರಿಯಾಗಿದ್ದಾರೆ. ನಗರದಲ್ಲಿ ದುರ್ವಾಸನೆ ಹೆಚ್ಚಾದ ಹಿನ್ನಲೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಸ್ಥಳೀಯರ ದೂರು ನೀಡಿದ ಹಿನ್ನಲೆ ಪೊಲೀಸರು ದಾಳಿ ನಡೆಸಿದ ವೇಳೆ ಅಕ್ರಮ ಕಸಾಯಿಖಾನೆ ಬೆಳಕಿಗೆ ಬಂದಿದೆ. ಇದೀಗ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ