ಮುಂಗಾರು ಅಧಿವೇಶನ ಪ್ರತಿಪಕ್ಷಗಳ ರಣತಂತ್ರ !

Kannada News

15-07-2017

ನವದೆಹಲಿ: ಕೇಂದ್ರದ  ಮುಂಗಾರು ಅಧಿವೇಶನ ಇನ್ನೇನು ಪ್ರಾರಂಭವಾಗಲಿದೆ. ಇದಕ್ಕೆ ಪ್ರತಿಪಕ್ಷಗಳು ಸಾಕಷ್ಟು ತಯಾರಿ ನಡೆಸಿವೆ. ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರಣತಂತ್ರ ರೂಪಿಸುತ್ತಿವೆ. ಇನ್ನು ಅಧಿವೇಶನದಲ್ಲಿ ಪ್ರಮುಖವಾಗಿ ಚೀನಾ ಗಡಿ ತಂಟೆ, ಜಮ್ಮು-ಕಾಶ್ಮೀರ ವಿಷಯಗಳನ್ನು ದಾಳವಾಗಿ ಬಳಸುವ ಸೂಚನೆ ನೀಡಿದ್ದಾರೆ. ನಿನ್ನೆಯಷ್ಟೆ ಕೇಂದ್ರ ಗೃಹ ಮಂತ್ರಿ ರಾಜ್ ನಾಥ್ ಸಿಂಗ್ ಮತ್ತು ಸುಷ್ಮಾ ಸ್ವರಾಜ್ ಅವರು ಚೀನಾ ವಿಚಾರವಾಗಿ ಸ್ಪಷ್ಟನೆ ನೀಡಿ ಮಾಹಿತಿ ನೀಡಿದ್ದರು, ಅಷ್ಟೇ ಅಲ್ಲದೇ  ಬಹುಜನ ಸಮಾಜವಾದಿ ಪಕ್ಷ, ತೃಣ ಮೂಲ ಕಾಂಗ್ರೆಸ್ ,ಹಾಗೂ ಶಿವ ಸೇನಾ ಪಕ್ಷಗಳು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಯುತ್ತಿವೆ, ಪ್ರಮುಖವಾಗಿ ಅಮರ ನಾಥ ಯಾತ್ರಿಕರ ಮೇಲೆ ದಾಳಿ ವಿಚಾರ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸುವ ಮುನ್ಸೂಚನೆಗಳನ್ನು ನೀಡಿವೆ. ಒಟ್ಟಾರೆ ಈ ಬಾರಿ ಅಧಿವೇಶನದಲ್ಲೂ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕುವುದರಲ್ಲಿ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.      ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ