ಅಪಘಾತದಲ್ಲಿ 12 ಮಂದಿಗೆ ಗಾಯ.  

Kannada News

14-07-2017

ಬೆಂಗಳೂರು: ಯಲಹಂಕದ ವೆಂಕಟಾಲ ಮೇಲುಸೇತುವೆ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ 4.10ರ ವೇಳೆ ಮುಂದೆ ಹೋಗುತ್ತಿದ್ದ ಲಾರಿಗೆ, ಟೆಂಪೋಟ್ರಾವೆಲರ್(ಟಿಟಿ) ಡಿಕ್ಕಿ ಹೊಡೆದು 12 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮುಂದೆ ಹೋಗುತ್ತಿದ್ದ ಲಾರಿ ಏಕಾಎಕಿ ನಿಧಾನ ಮಾಡಿದಾಗ, ವೇಗವಾಗಿ ಹೋಗುತ್ತಿದ್ದ ಟಿಟಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗದೇ ಚಾಲಕ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಯಲಹಂಕ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ