ನಗರದಲ್ಲಿ ಸರಣಿ ಅಪಘಾತ !

Kannada News

14-07-2017

ಬೆಂಗಳೂರು: ಪೀಣ್ಯ ಸಿಗ್ನಲ್ ಬಳಿ ಪೊಲೀಸ್ ಟೋಯಿಂಗ್ ವಾಹನದ ಬ್ರೇಕ್ ವೈಫಲ್ಯದಿಂದ ಗುರುವಾರ ಸರಣಿ ಅಪಘಾತ ನಡೆದಿದ್ದು, ವಾಹನಗಳು ಜಖಂಗೊಂಡಿವೆ. ತುಮಕೂರು ರಸ್ತೆಯ ಪೀಣ್ಯ ಸಿಗ್ನಲ್ ಹಾದು ಹೋಗಲು ಹಲವಾರು ವಾಹನಗಳು ಕಾಯುತ್ತಿದ್ದವು. ಈ ವೇಳೆ ಹಿಂದಿನಿಂದ ಬಂದ ಟೋಯಿಂಗ್ ವಾಹನ ಬ್ರೇಕ್ ವೈಫಲ್ಯಗೊಂಡಿದ್ದರಿಂದ ಇಂಡಿಕಾ ಕಾರು, ಎರಡು ಆಟೋ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಎಲ್ಲಾ ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೀಣ್ಯ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆ ನಗರದ ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 7ರ ಕನ್ನಮಂಗಲ ಗೇಟ್ ಬಳಿ ಗುರುವಾರ ರಾತ್ರಿ ರಸ್ತೆ ಕ್ರಾಸ್ ಮಾಡುತ್ತಿದ್ದ ಟಿಪ್ಪರ್ ಲಾರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಸುಮೋದಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಳಿ ಸಂಭವಿಸಿದೆ. ಒಂಬತ್ತು ಜನ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಸುಮೋ ದೇವನಹಳ್ಳಿಯಿಂದ ಏರ್ ಪೋರ್ಟ್‍ಗೆ ಹೊರಟಿತ್ತು. ಈ ವೇಳೆ ಕನ್ನಮಂಗಲ ಗೇಟ್ ಬಳಿ ಪಕ್ಕದ ರಸ್ತೆಯಿಂದ ಮತ್ತೊಂದು ರಸ್ತೆಗೆ ಲಾರಿ ಕ್ರಾಸ್ ಮಾಡುವ ವೇಳೆ ಟಾಟಾ ಸುಮೋ ಅತೀ ವೇಗದಿಂದ ಲಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡರವನ್ನು ಯಲಹಂಕ ಹಾಗೂ ದೇವನಹಳ್ಳಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ನಗರದಲ್ಲಿ ಸರಣಿ ಅಪಘಾತ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ