ಬೈಕ್ ಅಪಘಾತಕ್ಕೆ ಓರ್ವನ ಬಲಿ !

Kannada News

14-07-2017

ಬೆಂಗಳೂರು: ತುಮಕೂರು ರಸ್ತೆಯ ಪೀಣ್ಯದ ಮೇಲ್ಸೇತುವೆ ರಸ್ತೆಯಲ್ಲಿ ಗುರುವಾರ ರಾತ್ರಿ ಹಿಂದಿನಿಂದ ವೇಗವಾಗಿ ಬಂದ ಬೈಕ್, ಮುಂದೆ ಹೋಗುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ, ಅಲ್ಲದೇ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಅರಿಶಿನಕುಂಟೆಯ ದೇವಣ್ಣ ಪಾಳ್ಯದ ರಘುರಾಮಯ್ಯ (53)ಎಂದು ಗರುತಿಸಲಾಗಿದೆ. ಗಾಯಗೊಂಡಿರುವ ಶೇಷಾದ್ರಿಪುರಂ ಕಾಲೇಜಿನ, ಮಧ್ಯಪ್ರದೇಶ ಮೂಲದ ವಿದ್ಯಾರ್ಥಿಗಳಾದ ಮಯಾಂಕ್ ಹಾಗೂ ಯತಿರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾರ್ಮೆಂಟ್‍ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ರಘುರಾಮಯ್ಯ ಅವರು ರಾತ್ರಿ 10.30ರ ವೇಳೆ ಯಶವಂತಪುರಕ್ಕೆ ಬಂದು, ಅಲ್ಲಿಂದ ಮನೆಗೆ ಹೀರೊ ಹೋಂಡಾ ಬೈಕ್ ನಲ್ಲಿ, ಮೇಲ್ಸೇತುವೆ ರಸ್ತೆಯ ಶೋಭಾ ಅಪಾರ್ಟ್ ಮೆಂಟ್ಸ್ ಬಳಿ ಹೋಗುತ್ತಿದ್ದಾಗ, ಹಿಂದೆ ವೇಗವಾಗಿ ಬರುತ್ತಿದ್ದ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ. ಸ್ನೇಹಿತನ ಮನೆಯಲ್ಲಿ ಹಬ್ಬದ ಊಟಕ್ಕೆ ಶೇಷಾದ್ರಿಪುರಂ ಕಾಲೇಜಿನ ಬಿಬಿಎ ವಿದ್ಯಾರ್ಥಿಯಾಗಿದ್ದ ಮಯಾಂಕ್, ಬಿಕಾಂ ವಿದ್ಯಾರ್ಥಿಯಾಗಿದ್ದ ಯಶ್ರಾಜ್, ಎಫ್ಜೆಡ್ ಬೈಕ್ ನಲ್ಲಿ ವೇಗವಾಗಿ ಹೋಗುತ್ತ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಮೂವರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ರಘುರಾಮಯ್ಯ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ವಿದ್ಯಾರ್ಥಿಗಳು ಮಧ್ಯಪ್ರದೇಶದ ಮೂಲದವರಾಗಿದ್ದು, ಪ್ರಕರಣ ದಾಖಲಿಸಿರುವ ಪೀಣ್ಯ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ