ಬಂಟ್ವಾಳ: ಪೊಲೀಸ್ ಮಹಾ ನಿರ್ದೇಶಕರ ಭೇಟಿ

Kannada News

14-07-2017

ದಕ್ಷಿಣ ಕನ್ನಡ: ರಾಜ್ಯದಲ್ಲಿ ತೀವ್ರ ವಿವಾದದ ಅಲೆಯನ್ನೆಬ್ಬಿಸಿರುವ, ಆರ್.ಎಸ್.ಎಸ್ ಮುಖಂಡನ ಹತ್ಯೆ ಮತ್ತು ಬಂಟ್ವಾಳ ಅಹಿಕತಕರ ಘಟನೆಗಳ ಹಿನ್ನೆಲೆಯಲ್ಲಿ, ಬಂಟ್ವಾಳಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಆರ್.ಕೆ.ದತ್ತಾ ಭೇಟಿ ನೀಡಿದ್ದಾರೆ. ಶರತ್ ಹತ್ಯೆಯಾದ ಬಿ.ಸಿ.ರೋಡ್ ನ ಉದಯ ಲಾಂಡ್ರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಎಡಿಜಿಪಿ ಅಲೋಕ್ ಮೋಹನ್, ಐಜಿಪಿ ಹರಿಶೇಖರನ್, ಎಸ್.ಪಿ ಸುಧೀರ್ ರೆಡ್ಡಿ  ಈ ವೇಳೆ ಉಪಸ್ಥಿತಿರಿದ್ದರು, ಘಟನೆ ಕುರಿತು ಸಮಗ್ರ ಮಾಹಿತಿ ಪಡೆದ ಡಿಜಿಪಿ ದತ್ತಾ ಅವರು, ಎಸ್.ಡಿ.ಪಿ.ಐ ಮುಖಂಡ ಅಶ್ರಫ್ ಮತ್ತು ಕಾಂಗ್ರೆಸ್ ಮುಖಂಡ ಜಲೀಲ್ ಹತ್ಯೆ ಪ್ರದೇಶಕ್ಕೂ, ಹಾಗೂ ಬೆಂಜನಪದವು ಮತ್ತು ವಿಟ್ಲ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ