ನಮಗೂ ಬಸ್ ಪಾಸ್ ನಲ್ಲಿ ವಿನಾಯ್ತಿ ನೀಡಿ !

Kannada News

14-07-2017

ಧಾರವಾಡ: ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಬಸ್ ಪಾಸ್ ದರದಲ್ಲಿ ವಿನಾಯ್ತಿ ನೀಡವಂತೆ ಆಗ್ರಹಿಸಿ, ಧಾರವಾಡದಲ್ಲಿ ಎನ್‌ಎಸ್‌ಯುಐ ಮತ್ತು ಎಬಿವಿಪಿಯಿಂದ ಪ್ರತ್ಯೇಕ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲೆಯ ಕೆಸಿಡಿ ಕಾಲೇಜ್‌ ನಿಂದ ಜ್ಯುಬಿಲಿ ಸರ್ಕಲ್ ವರೆಗಗೂ, ಎನ್‌ಎಸ್‌ಯುಐ ವತಿಯಿಂದ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದರು. ಇನ್ನು ಜೆಎಸ್‌ಎಸ್ ಕಾಲೇಜ್‌ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಎಬಿವಿಪಿ ರ್ಯಾಲಿ ನಡೆಸಿ ಪ್ರತಿಭಟಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಂತೆ ನಮಗೂ ಬಸ್ ಪಾಸ್ ದರದಲ್ಲಿ ವಿನಾಯ್ತಿ ನೀಡಿವಂತೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ