ಸೇತುವೆ ಮೇಲಿಂದ ಗೂಡ್ಸ್ ಆಟೋ ಪಲ್ಟಿ !

Kannada News

14-07-2017

ಧಾರವಾಡ: ಗೂಡ್ಸ್ ಆಟೋ ಒಂದು ಪಲ್ಟಿಯಾದ ಘಟನೆ, ಧಾರವಾಡ ಹೊರವಲಯದ ನವಲೂರ ರೇಲ್ವೆ ಬಿಡ್ಜ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಬರುತಿದ್ದ ಗೂಡ್ಸ್ ಆಟೋ ಸೇತುವೆ ಮೇಲಿಂದ, ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಇದರ ಪರಿಣಾಮ ಗೂಡ್ಸ್ ಅಟೋದಲ್ಲಿದ್ದ ಚಾಲಕ‌ ಹಾಗೂ ಇನ್ನೋರ್ವನಿಗೆ ಗಂಭೀರ ಗಾಯಗಳಾಗಿವೆ.ಇನ್ನು ಘಟನೆ ಸಂಭವಿಸಿದ ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುಗಳನ್ನ ಸೇತುವೆ ಕೆಳಗಿನಿಂದ ಮೇಲೆ ತಂದು, ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.‌ ನವಲೂರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

ಧಾರವಾಡ ಸೇತುವೆ ಮೇಲಿಂದ ಆಟೋ ಪಲ್ಟಿ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ