ಮಾಜಿ ಶಾಸಕನ ಬಂಧನ !

Kannada News

14-07-2017

ವಿಜಯಪುರ: ಮರಳು ದಂಧೆ ಕೋರರು ಎಂದು ತಿಳಿದು, ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ, ಆರೋಪದ ಮೇಲೆ ಮಾಜಿ ಶಾಸಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇಂಡಿ, ಮಾಜಿ ಶಾಸಕ ರವಿಕಾಂತ ಪಾಟೀಲ್ ಬಂಧಿತರು, ಝಳಕಿ ಠಾಣೆ ಪೊಲೀಸರಿಂದ ನಿನ್ನೆ ತಡರಾತ್ರಿ ಬಂಧನವಾಗಿದೆ. ರೇವತಗಾಂವ ಗ್ರಾಮದ ಮೂವರ ಮೇಲೆ ಮಾರಣಾಂತಿಕ ಹಲ್ಲೆ  ಮಾಡಿರುವ ಆರೋಪದ ಮೇಲೆ, ತಡ ರಾತ್ರಿ ಜಾವ ಹಲಸಂಗಿ ಕ್ರಾಸ್ ಬಳಿ ಬಂಧಿಸಲಾಗಿದೆ. ಘಟನೆಯಲ್ಲಿ  ಮೂವರಿಗೆ ಗಂಭೀರ ಗಾಯಗಳಾಗಿದ್ದವು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ರವಿಕಾಂತ ಪಾಟೀಲ್ ರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

ವಿಜಯಪುರ ಮಾಜಿ ಶಾಸಕನ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ