ಹೋಟೆಲ್ ಗಳಲ್ಲಿ ಸರಣಿ ಕಳ್ಳತನ !

Kannada News

14-07-2017

ಮಂಡ್ಯ: ಹೋಟೆಲ್‌ಗಳಲ್ಲಿ ಸರಣಿ ಕಳ್ಳತನ ನಡೆಸಿ ಊಟ, ಹಣ ಲೂಟಿಮಾಡಿರುವ ಘಟನೆ ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿ ನಡೆದಿದೆ. ಶ್ರೀ ವೆಂಕಟೇಶ್ವರ ಹಿಂದೂ ಮಿಲ್ಟ್ರಿ ಹೋಟೆಲ್,  ಶ್ರೀ ಮಾರುತಿ ಕಬಾಬ್ ಸೆಂಟರ್, ಶ್ರೀರಾಮ ಜನರಲ್ ಸ್ಟೋರ್‌ನಲ್ಲಿ ಕಳ್ಳತನ ನಡೆಸಿದ್ದಾರೆ. ಮೊದಲು ಹೋಟೆಲ್‌ ನಲ್ಲಿದ್ದ ಕಬಾಬ್ ತಿಂದು, ಮೀನಿನ ಸಾರಿನಲ್ಲಿ ಊಟ ಮಾಡಿರುವ ಕಳ್ಳರು. ನಂತರ ಕ್ಯಾಶ್ ಬಾಕ್ಸ್ ಒಡೆದು ಹಣ ದೋಚಿದ್ದಾರೆ. ತಡರಾತ್ರಿಯಲ್ಲಿ ಘಟನೆ ಸಂಭವಿಸಿದ್ದೂ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ