ಶರತ್ ಮನೆಗೆ ಬಿ.ಎಸ್.ವೈ ಭೇಟಿ !

Kannada News

13-07-2017

ಮಂಗಳೂರು: ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮನೆಗೆ ಬಿ.ಎಸ್ ಯಡಿಯೂರಪ್ಪ ಅವರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಸಜಿಪ ಕಂದೂರು ಗ್ರಾಮದಲ್ಲಿ ಶರತ್ ಅವರ ನಿವಾಸವಿದ್ದೂ, ಅಲ್ಲಿಗೆ ತೆರಳಿದ ಯಡಿಯೂರಪ್ಪ, ಶರತ್ ತಂದೆ ತನಿಯಪ್ಪ ಸೇರಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಬಿ.ಎಸ್.ವೈ ಅವರ ಜೊತೆಗೆ ಸಂಸದೆ ಶೋಭ ಕರಂದ್ಲಾಜೆ ಸಾಥ್ ನೀಡಿದರು. ಇದಕ್ಕೂ ಮುನ್ನ ಗ್ರಾಮದಲ್ಲಿರುವ ಶಿಶು ಮಂದಿರಕ್ಕೆ ಭೇಟಿ ಮಾತನಾಡಿದ ಯಡಿಯೂರಪ್ಪನವರು, ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದಿದ್ದಾರೆ. ಇಂದು ನಡೆಯುವುದು ಶಾಂತಿ ಸಭೆ ಅಲ್ಲಾ, ಶಾಂತಿ ಕದಡುವ ಸಭೆ. ಅದಕ್ಕೆ ನಾವ್ಯಾರು ಹೋಗುವುದಿಲ್ಲ. ಶರತ್ ಹತ್ಯೆ ಅರೋಪಿಗಳ ಬಂಧನ ಆಗಬೇಕು, ಅದನ್ನು ಬಿಟ್ಟು ಮಖ್ಯಮಂತ್ರಿ ಪೊಲೀಸರಿಗೆ ಪ್ರಭಾಕರ ಭಟ್ ಅವರನ್ನು ಅರೆಸ್ಟ್ ಮಾಡಿ ಎಂದು ಹೇಳುತ್ತಾರೆ. ಮೊದಲು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಹೇಳಿದರು. ಅಲ್ಲದೇ ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಜಿಲ್ಲೆಯಲ್ಲಿ ಸ್ಫರ್ಧಿಸಲು ಸವಾಲು ಹಾಕಿರುವುದು ರಾಜಕೀಯ ಲಾಭ ಪಡೆಯುವ ಯತ್ನ ಎಂದು ಆರೋಪಿಸಿದ್ದಾರೆ. ಇನ್ನು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮತೀಯವಾದಿಗಳ ಬೆದರಿಕೆಗೆ ಬಗ್ಗಲ್ಲ. ಹೋರಾಟ ನಿಲ್ಲೋದಿಲ್ಲ. ಸರ್ಕಾರ ಮತ್ತು ಮತೀಯ ಸಂಘಟನೆಗಳಿಂದ ನಮ್ಮ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ. ಆದರೆ ನಾವು ಇದಕ್ಕೆ ಹೆದರುವುದಿಲ್ಲ, ನಮ್ಮ ಹೋರಾಟ ನಿಲ್ಲೋದಿಲ್ಲ ಎಂದಿದ್ದಾರೆ. ಮತೀಯ ಸಂಘಟನೆಗಳು ಬ್ಯಾನ್ ಆಗಬೇಕು, ಎನ್.ಐ.ಎ ಕಛೇರಿಯನ್ನು ಮಂಗಳೂರಿನಲ್ಲಿ ತೆರೆಯಬೇಕು ಎಂದಿದ್ದಾರೆ. ಶರತ್ ಹತ್ಯೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ನಡೆದಿರುವ ೨೪ ಹತ್ಯೆ, ಹಲ್ಲೆ ಪ್ರಕರಣಗಳನ್ನು ಎನ್ ಐ ಎಗೆ ವಹಿಸಬೇಕು, ಬಿ.ಸಿ.ರೋಡ್ ಗಲಭೆ ಬಗ್ಗೆ ಈಗಾಗಲೇ ಕೇಂದ್ರ ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ ಎಂದ ಅವರು, ನಾಡಿದ್ದು ಮತ್ತೊಮ್ಮೆ ಕೇಂದ್ರ ಗೃಹಸಚಿವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಕೇರಳದಿಂದ ಜನರನ್ನು ತರಿಸಿ ಇಲ್ಲಿ ಗಲಾಟೆ, ಹತ್ಯೆ ಮಾಡಿಸಲಾಗುತ್ತಿದೆ, ಎಲ್ಲಾ ಘಟನೆಗಳಿಗೂ ರಾಜ್ಯ ಸರ್ಕಾರವೇ ಹೊಣೆ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ