ಬೈಕ್ ಕಳ್ಳರ ಬಂಧನ !

Kannada News

13-07-2017 272

ಬೆಂಗಳೂರು: ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ, ಇಬ್ಬರನ್ನು ಬಂಧಿಸಿರುವ ಗಂಗಮ್ಮಗುಡಿ ಪೊಲೀಸರು 8 ಲಕ್ಷ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಬಾಣವಾರದ ಹಬ್ಬಿಗೆರೆಯ ಕನ್ನಯ್ಯ ಆಲಿಯಾಸ್ ಕಾರ್ತಿಕ್ (22), ವಿದ್ಯಾರಣ್ಯಪುರದ ಕಾನ್ಷಿರಾಮ್ ನಗರದ ರಮೇಶ್ (24) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 8 ಲಕ್ಷ ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಬ್ಬಿಗೆರೆಯ ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ಹೋಂಡಾ ಡಿಯೋ ಸ್ಕೂಟರ್ ಕಳವು ಮಾಡಿದ್ದ, ಪ್ರಕರಣ ದಾಖಲಿಸಿದ್ದ ಗಂಗಮ್ಮಗುಡಿ ಪೊಲೀಸ್ ಇನ್ಸ್ ಪೆಕ್ಟರ್ ಮೇರಿ ಶೈಲಜಾ ಅವರು, ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಂಧನದಿಂದ ಸುಬ್ರಹ್ಮಣ್ಯಪುರ , ಗಂಗಮ್ಮನಗುಡಿ, ರಾಜರಾಜೇಶ್ವರಿನಗರ, ವಿದ್ಯಾರಣ್ಯಪುರದ ತಲಾ 2 ಸೇರಿದಂತೆ 8 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಬೈಕ್ ಕಳ್ಳರ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ