ಸಮಯಕ್ಕೆ108 ಬರದೇ ಯುವಕನ ಸಾವು !

Kannada News

13-07-2017

ಮೈಸೂರು: ಪ್ರಾಣ ಉಳಿಸಬೇಕಾದ 108 ವಾಹನ ಸಕಾಲಕ್ಕೆ ಬಾರದೇ ಯುವಕ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ, ಹನೂರು ಬಳಿಯ, ಸಾಜ್ಯ ಗ್ರಾಮದ ಶಿವರುದ್ರಪ್ಪ ಮೃತ ದುರ್ದೈವಿ. ಹೊಟ್ಟೆನೋವು ತಾಳಲಾರದೆ ಶಿವರುದ್ರಪ್ಪ ಕ್ರಿಮಿನಾಶಕ ಸೇವಿಸಿದ್ದರು, ಈತನ ಪ್ರಾಣ ಉಳಿಸಲು ಹತ್ತಿರದ ಖಾಸಗಿ ಆಸ್ಪತ್ರೆಗೆ 108 ವಾಹನದಲ್ಲಿ ರವಾನೆ ಮಾಡಲಾಗಿತ್ತು, ಶಿವರುದ್ರಪ್ಪ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೇ, 108 ಸಿಬ್ಬಂದಿ ಜಾಗ ಖಾಲಿ ಮಾಡಿದ್ದಾರೆ. ಇನ್ನು ಶಿವರುದ್ರಪ್ಪ ನನ್ನು ಕೂಡಲೇ ಮೈಸೂರಿಗೆ ಕೊಂಡೊಯ್ಯುವಂತೆ ವೈದ್ಯರ ಸಲಹೆ ನೀಡಿದರು. ತಕ್ಷಣ 108 ನಂಬರ್ ಗೆ ಕಾಲ್ ಮಾಡಿದರು ಯಾರು ಸ್ಪಂದಿಸಲಿಲ್ಲ‌. ತಡರಾತ್ರಿ 1:30 ರಿಂದ ಮುಂಜಾನೆ 3:30 ರ ವರೆಗೂ 108 ಆಂಬ್ಯೂಲೆನ್ಸ್ ಬಂದಿರಲಿಲ್ಲ. ಸತತ ಮೂರು ಗಂಟೆಗಳಿಂದ ಕಾಲ್ ಮಾಡಿದರೂ ಆಂಬುಲೆನ್ಸ್ ಸಿಗದಿದ್ದೂ, ವಿಧಿಯಿಲ್ಲದೆ ಖಾಸಗಿ ವಾಹನದಲ್ಲಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಿದ್ದಾರೆ. ಆಸ್ಪತ್ರೆ ಮೆಟ್ಟಿಲೇರುವ ವೇಳೆಯೇ ಶಿವರುದ್ರಪ್ಪ ಕೊನೆಯುಸಿರೆಳೆದಿದ್ದಾರೆ. ಬಡ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಉದ್ದೇಶದಿಂದಲೇ 108 ಸೇವೆ ಆರಂಭಸಲಾಗಿತ್ತು ಆದರೆ, ಇದೇ 108 ಆಂಬ್ಯಲೆನ್ಸ್ ಬಾರದೆ ಯುವಕ ಬಲಿಯಾಗಿದ್ದಾನೆ. ತನ್ನ ಮಗನ ಸಾವಿಗೆ 108 ಆಂಬುಲೆನ್ಸ್ ಬಾರದಿರುವುದೇ ಕಾರಣ ಎಂದು ಆರೋಪಿಸಿದ್ದೂ, ಜಿಲ್ಲಾಡಳಿತ ವ್ಯವಸ್ಥೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ