ಪ್ರತಾಪ್ ಸಿಂಹ ಗೆ ಸಿಎಂ ತಿರುಗೇಟು !

Kannada News

13-07-2017

ಕೊಪ್ಪಳ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಬೇಕು, ಎಂದು ಕೊಪ್ಪಳದಲ್ಲಿಂದು ಸಿಎಂ ಸಿದ್ದರಾಮಯ್ಯ ಹೆಳಿದ್ದಾರೆ. ನಾನು ದೆಹಲಿಗೆ ಹೋಗಿಲ್ಲ. ಅಲ್ಲಿ ಹೋದ ಬಳಿಕ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದೂ, ಪ್ರತಾಪಸಿಂಹ ಅವರಿಗೆ ರಾಜಕೀಯವಾಗಿ ಮೆಚುರಿಟಿ ಆಗಿಲ್ಲ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಬಿಜೆಪಿಯವರು ಕೋಮವಾದ ಮಾಡುವವರು. ಬಿಜೆಪಿ ಮತ್ತು ಸಂಘ ಪರಿವಾರದವರೇ ಇದೆಲ್ಲವನ್ನು ಮಾಡಿ ಬೇರೆಯವರ ಮೇಲೆ ಹಾಕುತ್ತಾರೆ. ಬಿಜೆಪಿಯ ಅಪವಾದಗಳೆಲ್ಲವೂ ಸುಳ್ಳು ಎಂದರು. ಮತೀಯವಾದಿಗಳೇ ಮಂಗಳೂರು ಗಲಭೆಗೆ ಕಾರಣ. ಯಾವುದೇ ಸಂಘಟನೆಗಳು ಮತೀಯವಾದ ಮಾಡಿದರೆ ಅದು ತಪ್ಪು, ಮಂಗಳೂರು ಗಲಭೆ ಪ್ರದೇಶಕ್ಕೆ ಕೆಂಪಯ್ಯ ಹೋಗುತ್ತಿಲ್ಲ.‌ ಅಲ್ಲಿನ ಹಿರಿಯ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದು. ಕೊಪ್ಪಳದ ಬಸಾಪುರ ಬಳಿಯ ಖಾಸಗಿ ಏರೋಡ್ರೋಮ್ ನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ